ಬೆಂಗಳೂರು: ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರವನ್ನು ತುರ್ತು ನಿರ್ವಹಣಾ ಕಾರ್ಯದ ಸಲುವಾಗಿ ಇದೇ 4ರಿಂದ 10ರವರೆಗೆ ಮುಚ್ಚಲಾಗುತ್ತಿದೆ.

ಈ ಚಿತಾಗಾರರದ ಯಂತ್ರಗಳನ್ನು (ಫರ್ನೇಸ್) ಬದಲಾಯಿಸಬೇಕಾಗಿದೆ. ಹಾಗಾಗಿ ಚಿತಾಗಾರದಲ್ಲಿ ಅಂತ್ಯಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ ಎಂದು ರಾಜರಾಜೇಶ್ವರಿ ನಗರ ವಲಯದ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ತಿಳಿಸಿದ್ದಾರೆ.

ಈ ಚಿತಾಗಾರವನ್ನು ಕೋವಿಡ್‌ನಿಂದ ಸತ್ತವರ ಅಂತ್ಯಕ್ರಿಯೆಗೆ ಕಾಯ್ದಿರಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಲ್ಲಿ ನಿತ್ಯವು 20ಕ್ಕೂ ಅಧಿಕ ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಹಾಗಾಗಿ ಅತಿ ಒತ್ತಡದಿಂದ ಇಲ್ಲಿನ ಫರ್ನೇಸ್‌ಗಳು ಹದಗೆಟ್ಟಿದ್ದವು.

ಕಳೆದ 15 ದಿನಗಳಿಂದ ನಿತ್ಯವೂ 100ರಿಂದ 150 ಮಂದಿ ಕೋವಿಡ್‌ನಿಂದ ಸಾವಿಗೀಡಾಗುತ್ತಿದ್ದಾರೆ.ಸೋಮವಾರವೂ ನಗರದಲ್ಲಿ ನಗರದಲ್ಲಿ 115 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಈ ಚಿತಾಗಾರವನ್ನು ಮುಚ್ಚುತ್ತಿರುವುದರಿಂದ,ಕೋವಿಡ್‌ನಿಂದ ಸತ್ತವರ ಅಂತ್ಯಕ್ರಿಯೆಗೆ ಮೀಸಲಿಟ್ಟ ಇತರ ಚಿತಾಗಾರಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.