ಕಲಾಪ ವೀಕ್ಷಿಸಿದ ಭೂಪೇಶ್ ಬಘೇಲ್
ಛತ್ತೀಸ್ಘಡದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಕೇಂದ್ರದ ಮಾಜಿ ಸಚಿವ ಪ್ರದೀಪ್ ಜೈನ್ ಅವರು ಸೋಮವಾರ ವಿಧಾನಸಭೆಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಒಂದು ಗಂಟೆಗೂ ಹೆಚ್ಚು ಕಾಲ ಸದನದ ಕಲಾಪ ವೀಕ್ಷಿಸಿದರು. ಬಘೇಲ್ ಮತ್ತು ಪ್ರದೀಪ್ ಜೈನ್ ಕಲಾಪ ವೀಕ್ಷಿಸುತ್ತಿರುವುದನ್ನು ಪ್ರಕಟಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಇಬ್ಬರನ್ನೂ ಸ್ವಾಗತಿಸಿದರು.