ಬೆಂಗಳೂರು: ಕಿವಿ ಕೇಳದ ಜೀವಗಳಿಂದು ಹಸೆಮಣೆ ಏರುತ್ತಿವೆ. ಮೌನದ ನಡುವೆ ಅವರ ಬದುಕಿನಲ್ಲಿ ಗಟ್ಟಿಮೇಳ ಮೊಳಗುತ್ತಿದೆ.

ಇಂಥ ಜೀವಗಳ ಭಾವಗಳಿಗೆ ಸ್ವಯಂವರ ಟ್ರಸ್ಟ್ ಕಿವಿ, ಬಾಯಿಯಾಗಿ ಸ್ಪಂದಿಸಿದೆ. ಟ್ರಸ್ಟ್ ‘ಪೌರೋಹಿತ್ಯದಲ್ಲಿ’ ಗುರುವಾರ ಸ್ವಯಂವರ ನಡೆದಿದೆ. ಮೌನದ ಮನಗಳಿಗೆ ಜಾತಿ ಮತದ ಹಂಗು ಇಲ್ಲ. ಅವರವರ ಭಾವ ಅರ್ಥ ಮಾಡಿಕೊಳ್ಳುವ ಮನಸ್ಸುಗಳಿಗೇ ಇಲ್ಲಿ ಮಣೆ.

ಶ್ರವಣದೋಷವುಳ್ಳವರಿಗಾಗಿಯೇ ಏರ್ಪಡಿಸಿರುವ ಸ್ವಯಂವರದಲ್ಲಿವಿವಿಧ ರಾಜ್ಯಗಳಿಂದ ವಿವಿಧ ಧರ್ಮದ 30 ಯುವತಿಯರು, 40 ಯುವಕರು ಭಾಗವಹಿಸಿದ್ದರು. ಇಂಥವರ ಸಂಕೇತ ಭಾಷೆಯನ್ನೇ ಅರ್ಥ ಮಾಡಿಕೊಂಡು ಇನ್ನೊಬ್ಬರೊಂದಿಗೆ ವಿನಿಮಯ ಮಾಡಲು ಸಂಜ್ಞೆ ಭಾಷಾ ಪರಿಣತರಿದ್ದರು.

ಆಂಧ್ರಪ್ರದೇಶದ ಅನಂತಪುರಜಿಲ್ಲೆಯಿಂದ ಬಂದ ಹರಿಪ್ರಿಯಾ ಎಂಬ 20 ವರ್ಷದ ಮೂಕ ಯುವತಿ, ‘ಸುಶಿಕ್ಷಿತ, ಉದ್ಯೋಗಸ್ಥ ಉತ್ತಮ ವ್ಯಕ್ತಿಯನ್ನೇನಾನು ಅರಸುತ್ತಿದ್ದೇನೆ’ ಎಂದು ಸಂಜ್ಞೆ ಮೂಲಕ ಧೈರ್ಯದಿಂದಲೇ ಹೇಳಿದರು.

‘ನಿಮ್ಮ ಜೋಡಿಯನ್ನು ಇಂದೇ ಆಯ್ಕೆ ಮಾಡಿಕೊಂಡು ಮರುದಿನವೇ ದಾಂಪತ್ಯಕ್ಕೆ ಕಾಲಿಡಬೇಕೆನ್ನುವ ತತ್ವವನ್ನು ಇಲ್ಲಿನ ಸದಸ್ಯರು ಬಲವಾಗಿ ನಂಬಿದ್ದಾರೆ.ಹೊಂದಾಣಿಕೆ ಆಗುವಂಥವರನ್ನು ಹುಡುಕುವುದು ನಿಜಕ್ಕೂ ಕಷ್ಟದ ಕೆಲಸ’ ಎಂದು ಟ್ರಸ್ಟ್‌ನ ಸಂಸ್ಥಾಪಕ ಸಿ.ಎನ್.ವಿಜಯರಾಜ್ ಅಭಿಪ್ರಾಯಪಟ್ಟರು.

2001ರಿಂದ ಸುಮಾರು 5,000ಕ್ಕೂ ಅಧಿಕ ಜೋಡಿಗಳನ್ನು ಜತೆಯಾಗಿಸುವಲ್ಲಿ ವಿಜಯರಾಜ್ ಪ್ರಮುಖ ಪಾತ್ರವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.