ಬೆಂಗಳೂರು: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ನಡೆಸುವ ಅಂತರ ಶಾಲಾ ಕ್ವಿಜ್ ಸ್ಪರ್ಧೆ ‘ಟಿಸಿಎಸ್ ಐಟಿ ವಿಜ್’ನ 23ನೇ ಆವೃತ್ತಿಗೆ ನೋಂದಣಿ ಆರಂಭವಾಗಿದೆ.

ಆಸಕ್ತರು ಇದೇ 30ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

‘ಅಖಿಲ ಭಾರತ ಮಟ್ಟದ ಈ ಕ್ವಿಜ್ನ ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಕ್ವಿಜ್ ಆರಂಭಕ್ಕೆ ಮುನ್ನ ಎರಡು ಪ್ರತ್ಯೇಕ ಪ್ರಾಥಮಿಕ ಸುತ್ತುಗಳು ನಡೆಯಲಿವೆ. ಇವುಗಳನ್ನು ಟಿಸಿಎಸ್ನ ಐ ಆನ್ ಪ್ಲಾಟ್ಫಾರ್ಮ್ನಲ್ಲಿ ಆಯೋಜಿಸಲಾಗುತ್ತದೆ. ನಂತರ ಕ್ವಾರ್ಟರ್ ಫೈನಲ್ ನಿಗದಿಯಾಗಿದೆ. ಈ ಹಂತದಲ್ಲಿ 96 ವಿದ್ಯಾರ್ಥಿಗಳು ಇರಲಿದ್ದಾರೆ. ಈ ಪೈಕಿ ಉತ್ತಮ ಸಾಮರ್ಥ್ಯ ತೋರುವ 6 ಜನ ರಾಷ್ಟ್ರಮಟ್ಟದಲ್ಲಿ ನಡೆಯುವ ಫೈನಲ್ಗೆ ಅರ್ಹತೆ ಗಳಿಸಲಿದ್ದಾರೆ’ ಎಂದು ವಿವರಿಸಲಾಗಿದೆ.

‘ವಿಜೇತರಿಗೆ ‘ಐಟಿ ವಿಜಾರ್ಡ್ ಆಫ್ ದ ನೇಷನ್’ ಕಿರೀಟ, ಟ್ರೋಫಿ ಮತ್ತು ಚಿನ್ನದ ಪದಕ ನೀಡಲಾಗುತ್ತದೆ. ಇದರ ಜೊತೆಗೆ ಪ್ರಮಾಣಪತ್ರ ಹಾಗೂ ಉಡುಗೊರೆಯೂ ಸಿಗಲಿವೆ’ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.