ಬೆಂಗಳೂರು: 20 ವರ್ಷಗಳಿಂದ ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಬಳಕೆಯಲ್ಲಿದ್ದ ‘ನಾಗರಿಕ ಸೌಲಭ್ಯ’ (ಸಿ.ಎ) ನಿವೇಶನವನ್ನು ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಮಾರಾಟ ಮಾಡಿದೆ.

ವಿಜಯನಗರ 2ನೇ ಹಂತದ ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಡುವಿನ ‘ನಾಗರಿಕ ಸೌಲಭ್ಯ'ದ ಎರಡು ನಿವೇಶನಗಳ ಬಗ್ಗೆ 20 ವರ್ಷದ ನಂತರ ಗೊಂದಲ ಮೂಡಿದೆ. ಅಕ್ರಮಗಳನ್ನು ನಡೆಸಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಸಂಘಗಳ ನಿಬಂಧಕರು ಹಾಗೂ ಲೋಕಾಯುಕ್ತರಿಗೂ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ದೂರು ನೀಡಿದ್ದಾರೆ.

ಹೊಸಹಳ್ಳಿ ವಾರ್ಡ್‌ನಲ್ಲಿರುವ ವಿಜಯನಗರ ಟೆಲಿಕಾಂ ಬಡಾವಣೆಯ ಸುಮಾರು ಏಳು ಸಾವಿರ ಚದರ ಅಡಿ ವಿಸ್ತೀರ್ಣದ 5 ಮತ್ತು 6 ನಿವೇಶನಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡಿರುವ ಬಗ್ಗೆ ವಿವರಣೆ ನೀಡಲು ಸಹಕಾರ ಸಂಘಗಳ ನಿಬಂಧಕರು ಜೂನ್ 22ರಂದು ನೋಟಿಸ್ ಕೂಡ ಜಾರಿ ಮಾಡಿದ್ದಾರೆ.

ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ (ಟೆಲಿಕಾಂ ಎಂಪ್ಲಾಯೀಸ್ ಕೋ–ಆಪರೇಟಿವ್ ಹೌಸಿಂಗ್ ಸೊಸೈಟಿ) ಬಿಡಿಎ– 1975ರ ಕಾಯ್ದೆಯಂತೆ 1995–96ರಲ್ಲಿ 370 ನಿವೇಶನಗಳನ್ನು ವಿಜಯನಗರ ಟೆಲಿಕಾಂ ಬಡಾವಣೆಯಲ್ಲಿ ಹಂಚಿದೆ.ನಾಗರಿಕ ಸೌಲಭ್ಯ ಅಥವಾ ಕಟ್ಟಡಗಳನ್ನು ನಿರ್ಮಿಸಿ ಕೊಟ್ಟಿರಲಿಲ್ಲ. ಹೀಗಾಗಿ, 5 ಮತ್ತು 6ನೇ ನಿವೇಶನದಲ್ಲಿ 2002–03ರಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಕಟ್ಟಡ ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿತ್ತು. ಅದರಂತೆ ಕಟ್ಟಡ ನಿರ್ಮಾಣವಾಗಿ, ಸಂಘದ ಕಚೇರಿ ಸೇರಿದಂತೆ ಈವರೆಗೂ ನಾಗರಿಕ ಚಟುವಟಿಕೆಗಳು ಅಲ್ಲಿಯೇ ನಡೆಯುತ್ತಿವೆ ನಿವಾಸಿಗಳು ತಿಳಿಸಿದ್ದಾರೆ.

‘ನಕ್ಷೆಯನ್ನೇ ಮಾರ್ಪಾಟು ಮಾಡಿ ನಿವೇಶನ 6 ಅನ್ನು ₹ 2.32 ಕೋಟಿಗೆ ಅನಿಲ ತಿಲಕ್ ಅವರಿಗೆ ಮಾರಾಟ ಮಾಡಲಾಗಿದೆ. ಬಡಾವಣೆಯ ನಿವಾಸಿಗಳಿಗೆ ವಂಚಿಸಿ ಈ ಕ್ರಯಪತ್ರ ಮಾಡಿಕೊಟ್ಟಿದ್ದಾರೆ’ ಎಂದು ನಿವಾಸಿಗಳು ದೂರಿದ್ದಾರೆ.

ಕ್ರಯಪತ್ರ ರದ್ದು ಮಾಡಲು ಮನವಿ

‘ಬಿಡಿಎ ಮಂಜೂರು ಮಾಡಿರುವ ಮೂಲನಕ್ಷೆಯನ್ನು ತಿರುಚಿ ನಾಗರಿಕರ ಬಳಕೆಗೆ ಸೇರಬೇಕಾದ ಜಾಗವನ್ನು ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿಗಳು ಮಾರಾಟ ಮಾಡಿದ್ದಾರೆ. ಕ್ರಯಪತ್ರ ರದ್ದುಪಡಿಸಲು ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಲಾಗಿದೆ’ ಎಂದು ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರನಾಥ್ ಮನವಿ ಮಾಡಿದರು.

‘ಸಿಎ ನಿವೇಶನ ಅಲ್ಲ’

‘ಟೆಲಿಕಾಂ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳ ನಿವೇಶನ ಇಲ್ಲ. ಇತರೆ ನಿವೇಶನಗಳಂತೆ 5 ಮತ್ತು 6 ಕೂಡ ನಿವೇಶನಗಳೇ. ಅವುಗಳನ್ನು ಕ್ಷೇಮಾಭಿವೃದ್ಧಿ ಸಂಘ ಉಪಯೋಗಿಸಿಕೊಳ್ಳುತ್ತಿತ್ತು. ನಿವೇಶನಗಳನ್ನು ಸಂಘದ ನಿಯಮದಂತೆಯೇ ಮಾರಾಟ ಮಾಡಲಾಗಿದೆ. ಸಹಕಾರ ಸಂಘಗಳ ನಿಬಂಧಕರ ನೋಟಿಸ್‌ಗೆ ಉತ್ತರ ನೀಡಲಾಗಿದೆ’ ಎಂದು ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಜಿ. ಬಾಬು ತಿಳಿಸಿದರು. ‘ನೋಟಿಸ್ ಸಹಜ’: ‘ಸಿ.ಎ ನಿವೇಶನಗಳನ್ನು ಮಾರಾಟ ಮಾಡಿಲ್ಲ. ಸಿ.ಎ ಎಂದರೆ ಸರ್ಕಾರದ್ದು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಎಂದು ಕೊಟ್ಟಿಲ್ಲ. ಎಲ್ಲ ಸೊಸೈಟಿ ನಿವೇಶನಗಳು. ದೂರು ಬಂದಾಗ ನೋಟಿಸ್ ಕೊಡುವುದು ಸಹಜ’ ಎಂದು ಸಹಕಾರ ಸಂಘದ ಆಥರೈಸ್ಡ್ ಡೈರೆಕ್ಟರ್ ಸಿ.ವಿ.ಮಂಜುನಾಥ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.