ಬೆಂಗಳೂರು: ‘ಅಸಮಾನತೆ, ಜಾತಿ ವ್ಯವಸ್ಥೆಯಂತಹ ನಾವೇ ಕಟ್ಟಿಕೊಂಡ ಅದೃಶ್ಯ ಗೋಡೆಗಳು ಸೌಹಾರ್ದಯುತ ಬದುಕಿಗೆ ಅಡ್ಡಿಯಾಗಿವೆ. ಆದ್ದರಿಂದ, ಇಂತಹ ಗೋಡೆಗಳನ್ನು ಕೆಡವಿ, ಸಂಬಂಧ ಬೆಸೆಯುವ ಸೇತುವೆಗಳನ್ನು ನಿರ್ಮಿಸಬೇಕು’ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.

ಭಾನುವಾರ ಇಲ್ಲಿ ಬುಕ್ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ‘ಭಾಷೆ ಬೇರೆಯಾದರೂ, ಭಾವವೊಂದೇ’ ಕಾವ್ಯಾಭಿನಯ ಪ್ರಸ್ತುತಪಡಿಸಿದರು.

ಈ ವೇಳೆ ಮಾತನಾಡಿದ ಅವರು, ‘ಇಲ್ಲಿನ ಬಡವರು ವಿದೇಶದ ಅತಿಥಿಗೆ ಕಾಣಿಸಬಾರದು ಎಂಬ ಕಾರಣಕ್ಕೆ ದೇಶದ ಪ್ರಹಾಪ್ರಭು ರಸ್ತೆಯ ಇಕ್ಕೆಲಗಳಲ್ಲಿ ಗೋಡೆ ನಿರ್ಮಿಸಿದ್ದ ಘಟನೆ ನಮ್ಮ ಕಣ್ಣಮುಂದೆಯೇ ಇದೆ. ಇನ್ನೊಂದೆಡೆ, ಕಣ್ಣಿಗೆ ಕಾಣದ ಅದೆಷ್ಟೋ ಗೋಡೆಗಳು ಇಲ್ಲಿವೆ. ಯುದ್ಧ, ಅಸಮಾನತೆಯಂತಹ ಗೋಡೆಗಳ ನಿರ್ಮಾಣವು ನಮಗೆ ನಾವೇ ಮಾಡಿಕೊಂಡ ಗಾಯಗಳಾಗಿವೆ. ಗೋಡೆ ಪ್ರತ್ಯೇಕಿಸುವ ಪ್ರತೀಕವಾದರೆ, ಸೇತುವೆ ಸಂಬಂಧ ಬೆಸೆಯುವ ಪ್ರತೀಕ. ಹಾಗಾಗಿ, ಕಟ್ಟುವುದಾದರೆ ಸೇತುವೆಯನ್ನೇ ಕಟ್ಟೋಣ’ ಎಂದು ಹೇಳಿದರು.

‘ಭಾಷೆ ಹಲವಾದರೂ ಭಾವ ಒಂದೇ ಆಗಿರುತ್ತದೆ. ಲಿಪಿ, ಪದಗಳು ಬೇರೆ ಬೇರೆಯಾದರೂ ಭಾಷೆ ಹಿಡಿದಿಟ್ಟುಕೊಳ್ಳುವುದು ಮನುಷ್ಯನ ಭಾವನೆಯನ್ನು. ಅಸಮಾನತೆಯ, ಅನ್ಯಾಯದ ಈ ಜಗತ್ತನ್ನು ಬದಲಾಯಿಸಲು ನಾವೆಲ್ಲ ಒಂದಾಗಿದ್ದರೆ ಸಾಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.