ಬೆಂಗಳೂರು: ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬೆಂಗಳೂರಿನ ಮೂವರು ಆರೋಪಿಗಳನ್ನು ಗುಂಟೂರು ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

‘ಸುದ್ದಗುಂಟೆಪಾಳ್ಯದ ಎಸ್.ವಿ. ಅಭಿನಯ್, ಕಿಶೋರ್ ಪಿ. ರೆಡ್ಡಿ ಹಾಗೂ ಸುಮಂತ್ ಕುಮಾರ್ ಬಂಧಿತರು. ಇವರಿಂದ 60 ಕೆ.ಜಿ ಗಾಂಜಾ, ಎರಡು ಕಾರುಗಳು ಹಾಗೂ 7 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹44.28 ಲಕ್ಷ’ ಎಂದು ಗುಂಟೂರು ಜಿಲ್ಲಾ ಎಸ್ಪಿ ಆರಿಫ್ ಹಫೀಜ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಪ್ರಕಟಿಸಿರುವ ಗುಂಟೂರು ಪೊಲೀಸರು, ‘ಒಡಿಶಾದಿಂದ ಗಾಂಜಾವನ್ನು ತಂದಿದ್ದ ಆರೋಪಿಗಳು, ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು, ಆರೋಪಿಗಳನ್ನು ಬಂಧಿಸಲಾಗಿದೆ. ₹2.28 ಲಕ್ಷ ನಗದು ಸಹ ಆರೋಪಿಗಳ ಬಳಿ ಸಿಕ್ಕಿದೆ’ ಎಂದಿದ್ದಾರೆ.

ಮಾಜಿ ಕಾರ್ಪೊರೇಟರ್ ಮಗ?: ಬಂಧಿತ ಆರೋಪಿ ಎಸ್.ವಿ. ಅಭಿನಯ್, ಬೆಂಗಳೂರಿನ ಮಾಜಿ ಕಾರ್ಪೊರೇಟರ್‌ರೊಬ್ಬರ ಮಗನೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಗುಂಟೂರು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.