ಕೆ.ಆರ್.ಪುರ: ಹಳ್ಳಿಕಾರ್ ವರ್ತೂರು ಸಂತೋಷ್ ಬಂಧನ ಖಂಡಿಸಿ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘಟನೆಯ ಕಾರ್ಯಕರ್ತರು ಹಾಗೂ ಸಂತೋಷ್ ಅಭಿಮಾನಿಗಳು, ಗ್ರಾಮಸ್ಥರು ವರ್ತೂರಿನ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಅರಣ್ಯಾಧಿಕಾರಿಗಳ ವಿರುದ್ಧ, ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳಿಕಾರ್ ರಾಸುಗಳ ಸಂರಕ್ಷಣೆಯ ಮೂಲಕ ಗುರುತಿಸಿಕೊಂಡಿರುವ ಸಂತೋಷ್ ಅವರನ್ನು ಬಂಧಿಸಿರುವುದು ರೈತರಿಗೆ ಮಾಡುತ್ತಿರುವ ಅಪಮಾನ. ಎಫ್ಎಸ್ಎಲ್ ವರದಿ ಬಂದ ನಂತರ ಕ್ರಮ ಕೈಗೊಳಬೇಕು. ಏಕಾಏಕಿ ಬಂಧಿಸಿರುವುದನ್ನು ನೋಡಿದರೆ ‘ಬಿಗ್ ಬಾಸ್‘ನಲ್ಲಿನ ಜನಪ್ರಿಯರಾಗುತ್ತಿರುವುದನ್ನು ಸಹಿಸದೇ ಅವರ ವಿರೋಧಿಗಳು ಪಿತೂರಿ ಮಾಡಿ ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರ್ತೂರ್ ಸಂತೋಷ್ ವಿರುದ್ಧ ಕಾನೂನು ಕ್ರಮ ಜರುಗಿಸಿದಷ್ಟು ವೇಗವಾಗಿ ದರ್ಶನ್, ಜಗ್ಗೇಶ್, ರಾಕ್ಲೈನ್ ವೆಂಕಟೇಶ್ ವಿರುದ್ಧ ಯಾಕೆ ಜರುಗಿಸಿಲ್ಲ? ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದರು ಎಂಬ ಆರೋಪವೂ ಇದೆ. ಅವರ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.