ಹೊಸಕೋಟೆ: ಟೊಮೆಟೊ ಮತ್ತಿತರ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸುವ ಸಲುವಾಗಿ ತುಂಬಿಸಿಟ್ಟ ಟ್ರ್ಯಾಕ್ಟರ್ಗಳನ್ನು ರಾತ್ರಿ ಸಮಯ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಕೋಲಾರ ಮೂಲದ ಶಿವಾನಂದ ಹಾಗೂ ಆನಂದ ಎಂದು ಗುರ್ತಿಸಲಾಗಿದೆ. ರೈತರನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ ತೋಟಗಳಲ್ಲಿ ತರಕಾರಿ ಸಮೇತ ನಿಲ್ಲಿಸುತ್ತಿದ್ದ ಟ್ರ್ಯಾಕ್ಟರ್ಗಳನ್ನು ಕಳವು ಮಾಡುತ್ತಿದ್ದರು. ಇಂತಹ ಘಟನೆಗಳು ಕೋಲಾರ, ಚಿಂತಾಮಣಿ, ಹೊಸಕೋಟೆ ಭಾಗದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ರೈತರ ನಿದ್ದೆ ಕೆಡಿಸಿತ್ತು.

ಹೊಸಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಷ್ಟಪಟ್ಟು ಬೆಳೆಸಿದ ಟೊಮೆಟೊ ಹಾಗೂ ತರಕಾರಿ ಬೆಳೆ ರಾತ್ರೋರಾತ್ರಿ ಮಾಯವಾಗುತ್ತಿತ್ತು. ಈ ಪ್ರಕರಣಗಳು ಹೊಸಕೋಟೆ ಪೊಲೀಸರಿಗೆ ತಲೆನೋವಾಗಿತ್ತು.

ಬಂಧಿತರಿಂದ ಸುಮಾರು 12 ಟ್ರ್ಯಾಕ್ಟರ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಮಾಲೀಕರಿಗೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.