ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2ರಲ್ಲಿ ‘ಟೈಗರ್ ವಿಂಗ್ಸ್’ ಶೀರ್ಷಿಕೆಯ ‘ವರ್ಟಿಕಲ್ ಗಾರ್ಡನ್’ ಅನಾವರಣಗೊಂಡಿದೆ.

ಫ್ರಾನ್ಸ್ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದೊಂದಿಗೆ ಗುರುತಿಸಿಕೊಂಡಿರುವ ವಿಶ್ವದರ್ಜೆಯ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಅವರ ಸಹಯೋಗದೊಂದಿಗೆ 30 ಅಡಿ ಎತ್ತರ ಹಾಗೂ 160 ಅಡಿ ಅಗಲದ ವರ್ಟಿಕಲ್ ಗಾರ್ಡನ್ ಅನ್ನು ವಿನ್ಯಾಸಗೊಳಿಸಲಾಗಿದೆ.

‘ಟೈಗರ್ ವಿಂಗ್ಸ್’ ಹೆಸರಿನ ಈ ವರ್ಟಿಕಲ್ ಗಾರ್ಡನ್ ಅನ್ನು 153 ಜಾತಿಗಳ 15,000 ಕ್ಕೂ ಹೆಚ್ಚು ಸಸ್ಯಗಳಿಂದ ನಿರ್ಮಿಸಲಾಗಿದೆ. ಪ್ಯಾಟ್ರಿಕ್ ಬ್ಲಾಂಕ್ ಅವರು ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿ, ಈ ಗೋಡೆ ಉದ್ಯಾನ ನಿರ್ಮಿಸಿದ್ದಾರೆ.

ಗೋಡೆ ಉದ್ಯಾನವನ್ನು ಮಣ್ಣು ರಹಿತವಾಗಿ ನಿರ್ಮಿಸಲಾಗಿದೆ. ಈ ತಂತ್ರಜ್ಞಾನವನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಅದರ ಗಾಂಭೀರ್ಯವನ್ನು ಪ್ರತಿಬಿಂಬಿಸುವಂತೆ ಈ ಗೋಡೆ ಉದ್ಯಾನ ನಿರ್ಮಾಣಗೊಂಡಿದೆ. ಅದಕ್ಕಾಗಿಯೇ ‘ಟೈಗರ್ ವಿಂಗ್ಸ್’ ಎಂದು ಹೆಸರಿಡಲಾಗಿದೆ ಎಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ತಿಳಿಸಿದ್ದಾರೆ.

ಈ ಉದ್ಯಾನದಲ್ಲಿ ನೀರನ್ನು ಎಚ್ಚರಿಕೆಯಿಂದ ಬಳಸಲಾಗುತ್ತದೆ. ಪದರಗಳ ಮೂಲಕ ಸಸ್ಯಗಳಿಗೆ ಸರಿಯಾದ ಪ್ರಮಾಣದ ನೀರನ್ನು ಒದಗಿಸುತ್ತದೆ ಎಂದು ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.