ಬೆಂಗಳೂರು: ಕ್ಯಾನ್ಸರ್ನಿಂದ ಬಳಲುತ್ತಿದ್ದ 38 ವರ್ಷದ ಮಹಿಳೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಹಿರಿಯ ಸಲಹೆಗಾರ್ತಿಡಾ.ನೀತಿ ರೈಜಡಾ, ‘ರೋಗಿಯು ಇಂಟ್ರಾಕ್ರಾನಿಯಲ್ ರೊಸೈಡೊರ್ಫಮೈನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.ಅವರು ವಿವಾಹವಾಗಿ 12 ವರ್ಷಗಳಾಗಿದ್ದು, 2 ಬಾರಿ ಐವಿಎಫ್ ಚಿಕಿತ್ಸೆ ಮಾಡಿಸಿಕೊಂಡಿದ್ದರೂ ಮಕ್ಕಳಾಗಿರಲಿಲ್ಲ. ಇದರಿಂದ ಮಕ್ಕಳನ್ನು ಪಡೆಯುವ ಆಸೆಯನ್ನೇ ಕೈಬಿಟ್ಟಿದ್ದರು’ ಎಂದರು.

‘ಅಲ್ಲದೆ ಅವರಲ್ಲಿತಲೆನೋವು ಮತ್ತು ಮೂಗು ಕಟ್ಟಿಕೊಳ್ಳುವ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಇದರಿಂದಾಗಿಕಿಮೋಥೆರಪಿ ಚಿಕಿತ್ಸೆ ನೀಡಿದ ನಂತರ ಮೂರು ತಿಂಗಳಲ್ಲಿ ಗರ್ಭವತಿಯಾದರು’ ಎಂದರು.

ವೈದ್ಯ ಡಾ.ಡಿ.ಮೋಹನ್ ಮಹೇಂದ್ರಕರ್ ಮಾತನಾಡಿ, ‘ಮಗುವು ಬಹುಅಂಗಾಂಗ ಸಮಸ್ಯೆಯನ್ನು ಎದುರಿಸುತ್ತಿತ್ತು. ಅದನ್ನು ಉಳಿಸಿಕೊಳ್ಳುವುದು ನಮಗೆ ಸವಾಲಾಗಿತ್ತು. ಜನಿಸಿದ ದಿನವೇ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈ ಮೂಲಕ ತಾಯಿ ಹಾಗೂ ಮಗುವನ್ನು ಅಪಾಯದಿಂದ ಪಾರು ಮಾಡುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.