ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಪ್ರೊ ಬೆಂಗಳೂರು ಮ್ಯಾರಥಾನ್‌: ಲಕ್ಷ್ಮಿ, ಕಾರ್ತಿಕ್‌ಗೆ ಚಿನ್ನದ ಪದಕ

Published : 7 ಅಕ್ಟೋಬರ್ 2024, 3:56 IST
Last Updated : 7 ಅಕ್ಟೋಬರ್ 2024, 3:56 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತೀಯ ಸೇನೆಯ ಕಾರ್ತಿಕ್ ಕುಮಾರ್ ಮತ್ತು ರೈಲ್ವೇಸ್‌ನ ಕೆ.ಎಂ. ಲಕ್ಷ್ಮಿ ಅವರು ಭಾನುವಾರ ‘ವಿಪ್ರೊ ಬೆಂಗಳೂರು ಮ್ಯಾರಥಾನ್‌’ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಎಲೀಟ್‌ ವಿಭಾಗಗಳಲ್ಲಿ ಚಾಂಪಿಯನ್‌ ಆದರು.

ಪುರುಷರ ಎಲೀಟ್‌ ವಿಭಾಗದಲ್ಲಿ ಕಾರ್ತಿಕ್‌ 2 ಗಂಟೆ 22 ನಿಮಿಷ 50 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಸೇನೆಯ ಮತ್ತೊಬ್ಬ ಸ್ಪರ್ಧಿ ಪ್ರದೀಪ್‌ ಸಿಂಗ್‌ (2 ಗಂಟೆ 23 ನಿ.35ಸೆ) ಬೆಳ್ಳಿ ಗೆದ್ದರು. ರೈಲ್ವೇಸ್‌ನ ಹರ್ಷದ್‌ ಮ್ಹಾತ್ರೆ (2 ಗಂಟೆ 25 ನಿ.50ಸೆ) ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಮಹಿಳೆಯರ ಎಲೀಟ್ ವಿಭಾಗದಲ್ಲಿ ಲಕ್ಷ್ಮಿ 3 ಗಂಟೆ 21 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು. ಅಶ್ವಿನಿ ಮದನ್ ಜಾಧವ್ (3ಗಂಟೆ 12ನಿ.42ಸೆ) ಮತ್ತು ಜ್ಯೋತಿ ಶಂಕರರಾವ್ ಗಾವಟೆ (3 ಗಂಟೆ 25 ನಿಮಿಷ 21ಸೆ) ಕ್ರಮವಾಗಿ ನಂತರದ ಸ್ಥಾನ ಪಡೆದರು.

ವಿಪ್ರೊ ಪ್ರಾಯೋಜಿತ 11ನೇ ಆವೃತ್ತಿಯ ಮ್ಯಾರಥಾನ್​ನಲ್ಲಿ 30,000ಕ್ಕೂ ಅಧಿಕ ಓಟಗಾರರು ಪಾಲ್ಗೊಂಡರು. ಕಂಠೀರವ ಕ್ರೀಡಾಂಗಣ ದಿಂದ ಆರಂಭವಾದ ಓಟವು ನಗರದ ಎಂ.ಜಿ.ರಸ್ತೆ, ವಿಧಾನಸೌಧ, ಕಬ್ಬನ್ ಪಾರ್ಕ್ ಮೂಲಕ ಸಂಚರಿಸಿತು.

ಇತರ ಫಲಿತಾಂಶಗಳು: ಹಾಫ್‌ ಮ್ಯಾರಥಾನ್‌: ಪುರುಷರು: ಅಶೋಕ್ ಬೈಂಡ್ (ಕಾಲ: 1ಗಂಟೆ 12ನಿ. 05ಸೆ)–1, ಎಂ.ನಂಜುಂಡಪ್ಪ–2, ಮಣಿಕಂಠ ಪಿ.–3; ಮಹಿಳೆಯರು: ತೇಜಸ್ವಿನಿ (ಕಾಲ: 1ಗಂಟೆ 25ನಿ. 16ಸೆ)–1, ಮೋನಿಶಾ ಜೋಷಿ–2, ಬುಗಲಿ ಕುಮಾರಿ ಗುರ್ಜರ್–3. 10ಕೆ ಓಟ: ಪುರುಷರು: ಅವಿಕ್ ಭಟ್ಟಾಚಾರ್ಯ (ಕಾಲ: 40ನಿ. 18ಸೆ)–1, ವಿಜಯ್‌ ಕುಮಾರ್‌ ಬಿ.–2, ಶಿವಾನಂದ್‌ ಆರ್‌.–3; ಮಹಿಳೆಯರು: ಭಾರತಿ ಎಸ್. (ಕಾಲ: 56ನಿ. 06ಸೆ)–1, ಕಿಯೋಕೊ ಹಶಿಮೊಟೊ–2, ವೈಭವಿ ವಿಶ್ವನಾಥ್‌–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT