ಬೆಂಗಳೂರು: ನಾರಗಬಾವಿ ಬಿಡಿಎ ಸಮುಚ್ಚಯ ಬಳಿಯ ಮರಳು ದಾಸ್ತಾನು ಕೇಂದ್ರದ ಆವರಣದಲ್ಲೇ ಕಾರ್ಮಿಕ ಎಲ್.ಕೆ.ಸ್ವಾಮಿ (35) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೊಟ್ಟಿಗೇಪಾಳ್ಯದ ನಿವಾಸಿ ಸ್ವಾಮಿ, ಕೇಂದ್ರದಲ್ಲಿ ಮರಳು ಲೋಡ್–ಅನ್ಲೋಡ್ ಕೆಲಸ ಮಾಡುತ್ತಿದ್ದರು. ಕೇಂದ್ರದ ಆವರಣದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಜ. 27ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ವಾಮಿ ಆತ್ಮಹತ್ಯೆ ಬಗ್ಗೆ ಪತ್ನಿ ದೂರು ನೀಡಿದ್ದಾರೆ. ‘ಮರಳು ದಾಸ್ತಾನು ಕೇಂದ್ರದಲ್ಲಿರುವ ಚಾಲಕ ಸುರೇಶ್, ಚಂದ್ರು ಹಾಗೂ ಮಣಿ ಎಂಬುವರು ಕೆಲಸದ ವಿಚಾರವಾಗಿ ಪತಿ ಸ್ವಾಮಿ ಅವರಿಗೆ ಕಿರುಕುಳ ನೀಡುತ್ತಿದ್ದರು. ಜೀವ ಬೆದರಿಕೆಯೊಡ್ಡಿದ್ದರು. ಇದರಿಂದ ನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ಸುರೇಶ್, ಚಂದ್ರು ಹಾಗೂ ಮಣಿ ಕಾರಣ’ ಎಂಬುದಾಗಿ ಪತ್ನಿ ಆರೋಪಿಸಿದ್ದಾರೆ. ಮೂವರ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.