ಬೆಂಗಳೂರು ಮಹಾನಗರದಲ್ಲಿ 2019ರ ವಾರ್ಷಿಕ ಹಿನ್ನೋಟದಪಕ್ಷಿನೋಟ ಇಲ್ಲಿದೆ.

ಜನವರಿ 1: ಬಿಬಿಎಂಪಿ ಅಧೀನದ ಹೆರಿಗೆ ಆಸ್ಪತ್ರೆಗಳಲ್ಲಿ ವರ್ಷದ ಮೊದಲ ದಿನ ಜನಿಸಿದ ಎಲ್ಲ ಹೆಣ್ಣುಮಕ್ಕಳಿಗೆ ₹ 5 ಲಕ್ಷದ ಬಾಂಡ್ ನೀಡುವ ಪಿಂಕ್ ಬೇಬಿ ಯೋಜನೆ ಜಾರಿ.

ಜನವರಿ 18: ಮನೆ ಮನೆಯಿಂದ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಟೆಂಡರ್ ಆಹ್ವಾನ. ಟೆಂಡರ್ ಪ್ರಕ್ರಿಯೆ ಮುಕ್ತಾಯವಾದರೂ ಈ ಸುಧಾರಿತ ವ್ಯವಸ್ಥೆ ಅನುಷ್ಠಾನಕ್ಕೆ ಬರಲೇ ಇಲ್ಲ.

ಫೆಬ್ರುವರಿ 6: ಜಾಹೀರಾತು ನಿಷೇಧಿಸುವ ಬಿಬಿಎಂಪಿ ನಿರ್ಣಯಕ್ಕೆ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ತಡೆ

ಫೆಬ್ರುವರಿ 7: ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸಿದ ವಿಭಾಗೀಯ ನ್ಯಾಯಪೀಠ

ಜುಲೈ 15: ನಗರಾಭಿವೃದ್ಧಿ ಇಲಾಖೆಯಿಂದ ‘ಜಾಹೀರಾತು ನಿಯಮ 2019’ರ ಕರಡು ಅಧಿಸೂಚನೆ ಪ್ರಕಟ

ಜುಲೈ 30: ‘ಬಿಬಿಎಂಪಿ ಕಸ ನಿರ್ವಹಣೆ ಬೈಲಾ 2019’ಕ್ಕೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ. ಈ ನಿಯಮಕ್ಕೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿ ಅಂತಿಮ ರೂಪ.

ಜುಲೈ 31: ‘2018ರಲ್ಲಿ ಬಿಬಿಎಂಪಿ ರೂಪಿಸಿದ್ದ ‘ಹೊರಾಂಗಣ ಜಾಹೀರಾತು ಸೈನೇಜ್ ಮತ್ತು ಸಾರ್ವಜನಿಕ ಸಂದೇಶ ಬೈಲಾ’ವನ್ನು ತಿರಸ್ಕರಿಸಿ ನಗರಾಭಿವೃದ್ಧಿ ಇಲಾಖೆ ಆದೇಶ. ಬಳಿಕ ಹೈಕೋರ್ಟ್ ಇದನ್ನು ರದ್ದುಪಡಿಸಿ, ಬಿಬಿಎಂಪಿ ರಚಸಿದ್ದ ಬೈಲಾವನ್ನೇ ಅಂತಿಮಗೊಳಿಸುವಂತೆ ಸೂಚಿಸಿತು.

ಆಗಸ್ಟ್ 28: ಬಿಬಿಎಂಪಿ ನೂತನ ಆಯುಕ್ತರಾಗಿ ಬಿ.ಎಚ್.ಅನಿಲ್ಕುಮಾರ್ ಅಧಿಕಾರ ಸ್ವೀಕಾರ

ಸೆಪ್ಞೆಂಬರ್ 16: ಬಿಬಿಎಂಪಿಯ ವಿಶೇಷ/ ಹೆಚ್ಚುವರಿ ಆಯುಕ್ತರಿಗೆ ಎರಡು ವಲಯಗಳ ಸಂಪೂರ್ಣ ಜವಾಬ್ದಾರಿ. ಈ ವಲಯಗಳಿಗೆ ಸಂಬಂಧಿಸಿ ಆಯುಕ್ತರಿಗೆ ಇದ್ದ ಅಧಿಕಾರ ವಿಶೇಷ/ ಹೆಚ್ಚುವರಿ ಆಯುಕ್ತರಿಗೆ ವರ್ಗಾವಣೆ.

ಸೆಪ್ಟೆಂಬರ್ 18: 2012–13, 2013–14 ಹಾಗೂ 2014–15ನೇ ಸಾಲುಗಳ ಆಡಳಿತ ವರದಿ ಮಂಡಿಸಿದ ಉಪಮೇಯರ್ ಭದ್ರೇಗೌಡ. ನಾಲ್ಕು ವರ್ಷಗಳಿಂದ ಈ ವರದಿ ಮಂಡನೆ ಆಗಿರಲಿಲ್ಲ.

ಅಕ್ಟೋಬರ್ 1: ನೂತನ ಮೇಯರ್ ಆಗಿ ಎಂ.ಗೌತಮ್ ಕುಮಾರ್, ಉಪಮೇಯರ್ ಆಗಿ ರಾಮಮೋಹನರಾಜು ಆಯ್ಕೆ

ಅಕ್ಟೋಬರ್ 31: ಕೆ.ಆರ್.ಮಾರುಕಟ್ಟೆಯಲ್ಲಿನ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಬೇಕು ಮತ್ತು ಹೊಸದಾಗಿ ಯಾವುದೇ ಮಳಿಗೆ ಹಂಚಿಕೆ ಮಾಡಬಾರದು ಎಂದು ಹೈಕೋರ್ಟ್ ಆದೇಶ. ಮಾರುಕಟ್ಟೆಯಲ್ಲಿನ ಮಳಿಗೆಗಳ ಸುರಕ್ಷತೆ ಬಗ್ಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತ ವರದಿ ಸಲ್ಲಿಸುವಂತೆ ಸೂಚನೆ.

ಡಿಸೆಂಬರ್ 23: ನಗರದ ರಸ್ತೆಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ‘ಬೀದಿಯೊಂದನ್ನು ದತ್ತು ಪಡೆಯಿರಿ’ (ಅಡಾಪ್ಟ್-ಎ ಸ್ಟ್ರೀಟ್) ಯೋಜನೆಗೆ ಪಾಲಿಕೆ ಚಾಲನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.