ಬೆಂಗಳೂರು: ಇಲ್ಲಿನ ಎಂ.ಎಸ್. ರಾಮಯ್ಯ ಸಿಗ್ನಲ್ನಿಂದ ಅಶ್ವಥ್ ನಗರ ರಸ್ತೆಗೆ ಯಡಿಯೂರಪ್ಪ ಹೆಸರಿಡಬೇಕು ಹಾಗೂ ಕೆ.ಎಚ್ ಪಾಟೀಲ್ ಅವರ ಹೆಸರನ್ನು ಬೇರೆ ರಸ್ತೆಗೆ ಇಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗಾಗಲೇ ಈ ರಸ್ತೆಗೆ ಯಡಿಯೂರಪ್ಪ ಅವರ ಹೆಸರು ಇಡುವ ಬಗ್ಗೆ ಪ್ರಸ್ತಾವನೆ ಇದೆ. ನಾಗರಿಕರು ಹಾಗೂ ಸ್ಥಳೀಯರ ಅಭಿಪ್ರಾಯವೂ ಇದೇ ಆಗಿದೆ. ಈ ರಸ್ತೆ ಯಡಿಯೂರಪ್ಪ ಅವರ ನಿವಾಸದ ಬಳಿ ಇದೆ. ಇದಕ್ಕೆ ಬೇರೆ ಹೆಸರಿಡುವುದು ಸಮಂಜಸವಲ್ಲ. ಪಾಟೀಲ್ ಅವರ ಹೆಸರು ಬೇರೆ ರಸ್ತೆಗೆ ಇಡಬೇಕು ಎಂದು ಹೇಳಿದ್ದಾರೆ.

ದಯವಿಟ್ಟು ಈ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಗೆ ಯಡಿಯೂರಪ್ಪ ಅವರ ಹೆಸರಿಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಶಿವಕುಮಾರ್ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.