ಬೆಂಗಳೂರು: ಮದ್ಯದ ನಶೆಯಲ್ಲಿ ‘ರೀಲ್ಸ್’ ಮಾಡಲು ಪಣತ್ತೂರು ಕೆರೆಗೆ ಇಳಿದಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನೇಪಾಳದ ಅನಿಲ್ (22) ಮೃತ ಯುವಕ.

ಆತನ ಜತೆಗೇ ಕೆರೆಗೆ ಇಳಿದಿದ್ದ ದಿನೇಶ್ ಎಂಬಾತ ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ನೇಪಾಳದ ಅನಿಲ್, ದಿನೇಶ್ ಹಾಗೂ ಉಪೇಂದ್ರ ಎಂಬುವವರು ಭಾನುವಾರ ಸಂಜೆ ಮದ್ಯಪಾನ ಮಾಡಿ ಪಣತ್ತೂರು ಕೆರೆ ಬಳಿ ಹೋಗಿದ್ದರು. ಈ ಪೈಕಿ ಅನಿಲ್, ದಿನೇಶ್, ರೀಲ್ಸ್ ಮಾಡಲು ಕೆರೆಗೆ ಇಳಿದಿದ್ದರು. ಉಪೇಂದ್ರ, ದಡದಲ್ಲಿ ಕುಳಿತು ಮೊಬೈಲ್‌ನಿಂದ ಆ ಇಬ್ಬರ ‘ರೀಲ್ಸ್’ ದೃಶ್ಯ ಚಿತ್ರೀಕರಿಸುತ್ತಿದ್ದರು.

ಆಗ ಅನಿಲ್ ನೀರಿನಲ್ಲಿ ಮುಳುಗಿದ್ದರು. ಗಾಬರಿಯಾದ ದಿನೇಶ್, ಈಜಿ ದಡಕ್ಕೆ ಬಂದಿದ್ದಾರೆ. ನಂತರ, ದಿನೇಶ್ ಮತ್ತು ಉಪೇಂದ್ರ, ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆದರೆ, ಅಷ್ಟರಲ್ಲಿ ಅನಿಲ್ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಮೂವರು ಪಣತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅನಿಲ್ ಮತ್ತು ದಿನೇಶ್, ಸ್ಥಳೀಯ ಅಪಾರ್ಟ್‌ಮೆಂಟ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಉಪೇಂದ್ರ ಅವರು ಅದೇ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶವ ಪತ್ತೆಗಾಗಿ ಬೋಟ್‌ಗಳ ಮೂಲಕ ಶೋಧ ಕಾರ್ಯ ನಡೆಸಿದ್ದು, ರಾತ್ರಿ 9 ಗಂಟೆ ಸುಮಾರಿಗೆ ಶವ ಪತ್ತೆಯಾಯಿತು. ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.