ಬೆಂಗಳೂರು: `ಆತ್ಮಕಥೆಗಳಲ್ಲಿ ಶೇ 5 ರಷ್ಟು ಮಾತ್ರ ಸತ್ಯಾಂಶ ಇರುತ್ತದೆ. ಬಹುತೇಕ ಆತ್ಮಕಥೆಗಳಲ್ಲಿ ಪ್ರಾಮಾಣಿಕತೆಯ ಕೊರತೆ ಇದೆ' ಎಂದು ಇತಿಹಾಸ ಸಂಶೋಧಕ ಪ್ರೊ.ಷ.ಶೆಟ್ಟರ್ ಅಭಿಪ್ರಾಯಪಟ್ಟರು.

`ಸಂಚಯ' ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಎಂ.ಎಸ್.ಪ್ರಭಾಕರ್ (ಕಾಮರೂಪಿ) ಅವರ `ಸಮಗ್ರ ಕಾಮರೂಪಿ' ಕಥೆ, ಕಾದಂಬರಿ, ಕವಿತೆ, ಬ್ಲಾಗ್ ಬರಹಗಳ ಸಮಗ್ರ ಸಂಪುಟ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಅಭಿನಂದನಾ ಗ್ರಂಥಗಳಲ್ಲಂತೂ ಪ್ರಾಮಾಣಿಕತೆ ಅಲ್ಪಪ್ರಮಾಣದಲ್ಲಿ ಇರುತ್ತದೆ. ಕಾಮರೂಪಿ ಅವರ ಪುಸ್ತಕದಲ್ಲಿ ಪ್ರಾಮಾಣಿಕತೆ ಶೇ 80ರಷ್ಟು ಇದೆ. ಇಲ್ಲಿರುವ ಪ್ರತಿ ವಾಕ್ಯ ಕಲಾಕೃತಿಯಂತೆ ಇದೆ. ಇಲ್ಲಿನ ವಿಷಯ ಹಾಗೂ ಭಾಷೆ ಅದ್ಭುತವಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಕಡಿಮೆ ಬರೆಯುವವರು ಚೆನ್ನಾಗಿ ಬರೆಯುತ್ತಾರೆ. ಕೆಲವು ಪ್ರಾಧ್ಯಾಪಕರು 150-160 ಪುಸ್ತಕಗಳನ್ನು ಬರೆಯುತ್ತಾರೆ. ಈ ಪುಸ್ತಕಗಳ ಪ್ರಮಾಣ ಅದ್ಭುತವಾದುದು. ಆದರೆ, ಈ ಪುಸ್ತಕಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತದೆ. ಕಾಮರೂಪಿ ಅವರು ಕಡಿಮೆ ಬರೆದ ಕಾರಣ ಅವರ ಕೃತಿಗಳೆಲ್ಲ ಚೆನ್ನಾಗಿವೆ' ಎಂದರು.

ವಿಮರ್ಶಕ ರಹಮತ್ ತರೀಕೆರೆ ಮಾತನಾಡಿ, `ಕಾಮರೂಪಿ ಬರಹಗಳಲ್ಲಿ ತಾಜಾತನ ಇದೆ. ಅವರ ಜೀವನದೃಷ್ಟಿ ಮತ್ತೆ ಮತ್ತೆ ಹುಡುಕುವುದು ಹಾಗೂ ಪ್ರಯಾಣ. ಕಿಲಾಡಿತನ ಹಾಗೂ ಜಗಳಗಂಟತನ ಅವರ ಬರಹದ ವೈಶಿಷ್ಟ್ಯ. ಮಾತುಕತೆಗಳ ಮೂಲಕವೇ ಅವರು ಕಥೆಗಳನ್ನು ಬೆಳೆಸುತ್ತಾರೆ' ಎಂದರು.

`ವ್ಯಂಗ್ಯ ಹಾಗೂ ತಮಾಷೆಯ ಮೂಲಕವೇ ಜೀವನವನ್ನು ನೋಡುವ ದೃಷ್ಟಿಕೋನದಿಂದ ಈ ಬರಹಕ್ಕೆ ವಿಶೇಷ ಶಕ್ತಿ ತಂದುಕೊಟ್ಟಿದೆ. ಕಾಮರೂಪಿ ಅವರು ಬರಹದ ಮೂಲಕ ವ್ಯಕ್ತಿಯ ಕೃತ್ರಿಮತೆ, ಆಷಾಢಭೂತಿತನ ವಿರುದ್ಧ ಯಾವಾಗಲೂ ದಾಳಿ ಮಾಡುತ್ತಾರೆ. ಅವರ ಬರಹಗಳಲ್ಲಿ ಐಡೆಂಟಿಟಿಗಾಗಿ ಹುಡುಕಾಟವನ್ನು ಕಾಣಬಹುದು' ಎಂದು ಅವರು ವಿಶ್ಲೇಷಿಸಿದರು.

ಕಥೆಗಾರ ಅಬ್ದುಲ್ ರಶೀದ್, `ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಬಹುತೇಕ ವಿಷಯಗಳಲ್ಲಿ ಇಡೀ ಕರ್ನಾಟಕವನ್ನು ಬೆಂಗಳೂರು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಬಹಳ ವರ್ಷಗಳಿಂದ ಇಲ್ಲಿ ಲೆಕ್ಕವಿಲ್ಲದಷ್ಟು ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿವೆ.

ಬೇರೆ ಬೇರೆ ಜಿಲ್ಲೆಗಳಿಂದ ನಗರಕ್ಕೆ ಬರುವ ಬರಹಗಾರರಿಗೆ ಅನಾಥ ಭಾವನೆ ಕಾಡುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಬರಹಗಾರರು ಹಾಗೂ ಓದುಗರು ರಾಜ್ಯದ ಇತರ ಕಡೆಗಳಲ್ಲಿ ಇರುವ ಬರಹಗಾರರನ್ನು ಹುಡುಕಿಕೊಂಡು ಅವರ ಊರಿಗೆ ಹೋಗಬೇಕು' ಎಂದರು. ಲೇಖಕ ಎಂ.ಎಸ್.ಪ್ರಭಾಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.