ಬೆಂಗಳೂರು: ಎಚ್‌ಬಿಆರ್ ಲೇಔಟ್ ಬಳಿಯ ಹೊರ ವರ್ತುಲ ರಸ್ತೆ ಯಲ್ಲಿ ಸೈಯದ್ ಜುಬೇರ್ ಮೇಲೆ ಶುಕ್ರ ವಾರ ರಾತ್ರಿ ಗುಂಡಿನ ದಾಳಿ ನಡೆಸಿ ಪರಾರಿಯಾದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

‘ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಜುಬೇರ್, ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದಾರೆ. ಗುಂಡಿನ ದಾಳಿಗೆ ಕಾರಣ ಗೊತ್ತಾಗಿಲ್ಲ’ ಎಂದು ಡಿಸಿಪಿ ರಾಹುಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜುಬೇರ್ ಸಂಬಂಧಿಕರು, ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಥವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ವಂಚನೆ ವಿರುದ್ಧ ಹೋರಾಟ: ‘ಕೆ.ಜಿ.ಹಳ್ಳಿಯ ಉದ್ಯಮಿಯೊಬ್ಬರು, ‘ಆಲಾ ವೆಂಚರ್ಸ್ ಕಂಪನಿ’ ಆರಂಭಿಸಿ ದ್ದರು. ತಿಂಗಳಿಗೆ ಶೇ 10ರಷ್ಟು ಬಡ್ಡಿ ಆಮಿಷ ವೊಡ್ಡಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿದ್ದರು. ಹಣ ಕಳೆದು ಕೊಂಡವರ ಪರ ಜುಬೇರ್ ಹೋರಾಟ ಮಾಡುತ್ತಿದ್ದರು. ಪ್ರಕರಣದ ಆರೋಪಿಗಳ ಜೊತೆಗಿನ ಮೊಬೈಲ್ ಸಂಭಾಷಣೆಗಳನ್ನು ಜುಬೇರ್, ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಆರೋಪಿಗಳು, ಜೀವ ಬೆದರಿಕೆ ಹಾಕುತ್ತಿದ್ದರು’ ಎಂಬುದಾಗಿ ಸಂಬಂಧಿಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.