ಬೆಂಗಳೂರು: ‘ನವ್ಯ ಕಾಲದ ವಿಮರ್ಶೆಯಲ್ಲಿ ಇದು ಓದಬೇಡಿ, ಅದು ಓದಿ ಎಂಬ ನಿರ್ದಾಕ್ಷಿಣ್ಯ ಬರಹ ಕಾಣುತ್ತಿದ್ದೆವು. 80ರ ದಶಕದ ನಂತರ ವಿಮರ್ಶೆಯ ದೃಷ್ಟಿಕೋನ ಬದಲಾಯಿತು’ ಎಂದು ಚಿಂತಕ ಡಾ.ಕೆ.ಮರುಳಸಿದ್ಧಪ್ಪ ಅಭಿಪ್ರಾಯಪಟ್ಟರು.

ಸಪ್ನ ಬುಕ್ ಹೌಸ್ ಹಾಗೂ ಸುಚಿತ್ರ ಕಲಾ ಕೇಂದ್ರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಎಸ್.ಆರ್. ವಿಜಯಶಂಕರ ಅವರ ವಿಮರ್ಶಾ ಸಂಕಲನ ‘ಅಪ್ರಮೇಯ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಮರ್ಶಕ ಡಾ.ಎಚ್.ಎನ್ ಮುರಳೀಧರ್ ಮಾತನಾಡಿ, ‘ಚಳವಳಿಗಳ ಧೋರಣೆಯಿಂದ ಸಾಹಿತ್ಯವನ್ನು ನೋಡುವುದನ್ನು ಬಿಟ್ಟು ಮನುಷ್ಯ ಲೋಕದ ಕಡೆಯಿಂದ ಒಂದು ಕೃತಿಯನ್ನು ಅನುಸಂಧಾನ ಮಾಡುವುದು ವಿಜಯಶಂಕರ ಅವರ ವಿಮರ್ಶಾ ವಿಧಾನ. ಅವರು ವಿಮರ್ಶಾ ತತ್ವಗಳ ಬದಲು ಓದುಗನ ನೆಲೆಯಿಂದ ಕೃತಿಯನ್ನು ವಿಮರ್ಶಿಸುತ್ತಾರೆ’ ಎಂದರು.

ಕತೆಗಾರ ಕೆ.ಸತ್ಯನಾರಾಯಣ ಮಾತನಾಡಿ, ‘ನವೋದಯ ಮತ್ತು ನವ್ಯದ ಸಂದರ್ಭಗಳಲ್ಲಿ ಸಾಹಿತ್ಯ ಮತ್ತು ವಿಮರ್ಶೆ ನಡುವೆ ಒಂದು ಸಾವಯವ ಸಂಬಂಧವಿತ್ತು.ನಂತರದ ದಿನಗಳಲ್ಲಿ ಅದು ಕಣ್ಮರೆಯಾಯಿತು. ಆ ಸಂಬಂಧವನ್ನು ಮರುಸ್ಥಾಪಿಸುವ ಕಳಕಳಿಯನ್ನು ಇಲ್ಲಿಯ ಬರಹಗಳು ಹೊಂದಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.