ಬಸವಕಲ್ಯಾಣ (ಬೀದರ್ ಜಿಲ್ಲೆ): `ರಾಷ್ಟ್ರ ಮಟ್ಟದಲ್ಲಿ ಬಸವ ಜಯಂತಿ ಆಚರಿಸುವಂತಾಗಲು ಸಂಬಂಧಿತರಿಗೆ ಮನವಿ ಸಲ್ಲಿಸಿ ಪ್ರಯತ್ನಿಸಲಾಗುವುದು. ಅವರು ಬರೀ ಕರ್ನಾಟಕಕ್ಕಲ್ಲ ವಿಶ್ವಕ್ಕೆ ಸಂಬಂಧಿಸಿದ ವಿಶ್ವಗುರು' ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯಿಂದ ಭಾನುವಾರ ನಡೆದ ಎರಡು ದಿನಗಳ 45ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.

`ಇಂಥ ಕಾರ್ಯಕ್ರಮಗಳಲ್ಲಿ ಸಮಾಜ ಜಾಗೃತಿ ಹಾಗೂ ಅಭಿವೃದ್ಧಿಯ ಬಗ್ಗೆ ಚಿಂತನೆ ವ್ಯಕ್ತವಾಗಬೇಕು. ಲಿಂಗಾಯತರ ಶಕ್ತಿ ಅನ್ಯರಿಗೆ ಅರ್ಥ ಆಗುತ್ತಿಲ್ಲ. ಆದ್ದರಿಂದ ಸುಮ್ಮನೆ ಕುಳಿತರೆ ಸಾಲದು. ಸಂಘಟಿತರಾಗಿ ಹಕ್ಕುಗಳಿಗಾಗಿ ಬಡಿದಾಡಬೇಕಾಗಿದೆ. ಬಸವತತ್ವ ನಂಬಿದವರಿಗೆ ಕೇಡು ಇಲ್ಲ. ನಾನು ಬಸವತತ್ವದವನಾಗಿದ್ದು ಮುಖ್ಯಮಂತ್ರಿ ಆಗಿದ್ದಾಗ ಮೂಢನಂಬಿಕೆಗೆ ಆಸ್ಪದ ನೀಡಲಿಲ್ಲ. ಬಸವಣ್ಣನವರ ಬಗ್ಗೆ ಎಲ್ಲರಿಗೂ ಆಸಕ್ತಿ ಹುಟ್ಟುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಅಲ್ಲಲ್ಲಿ ಇವರ ಹೆಸರು ಪ್ರಸ್ಥಾಪಿಸುತ್ತಿದ್ದಾರೆ' ಎಂದರು.

`ಹೊಸ ಅನುಭವ ಮಂಟಪಕ್ಕೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅನುದಾನ ನೀಡಿದ್ದಾರೆ. ಕೆಲಸ ಭರದಿಂದ ಸಾಗಿದೆ. ನಾನು ಸ್ಥಳಕ್ಕೆ ಭೇಟಿನೀಡಿ ವೀಕ್ಷಿಸಿದ್ದೇನೆ. ಮುಂದಿನ ವರ್ಷ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವಿಮಾನ ನಿಲ್ದಾಣ, ರೈಲ್ವೆ ಮತ್ತಿತರೆ ಮೂಲ ಸೌಕರ್ಯಗಳು ದೊರೆತರೆ ಮುಂದಿನ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲ ಆಗಲಿದೆ' ಎಂದರು.

ಬೀದರ್ ಸಂಸದ ಸಾಗರ ಖಂಡ್ರೆ ಮಾತನಾಡಿ, `ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನತೆಗೆ ಪ್ರಾಮುಖ್ಯತೆ ಇತ್ತು. ಅವರು ಕಾಯಕ, ದಾಸೋಹ ತತ್ವ ಸಾರಿದರು. ಅದರ ಪಾಲನೆ ಆಗಲಿ' ಎಂದರು.

ಬೈಲೂರು ನಿಜಗುಣಾನಂದ ಸ್ವಾಮೀಜಿ ಮಾತನಾಡಿ, `ಲಿಂಗಾಯ ಧರ್ಮವು ಪ್ರಜಾಧರ್ಮವಾಗಿದೆ. ಮಾನವ ಹಕ್ಕುಗಳ ಪ್ರತಿಪಾದನೆ ಇದರಲ್ಲಿದೆ. ಆದ್ದರಿಂದ ಯಾವುದೇ ಭೇದಭಾವ ವ್ಯಕ್ತಪಡಿಸಿದೆ ಎಲ್ಲರೂ ಒಗ್ಗೂಡಿ ಧರ್ಮ ಮಾನ್ಯತೆ ಪಡೆಯಬೇಕಾಗಿದೆ. ಮಠಾಧೀಶರಲ್ಲಿನ ದ್ವಂದ ನಿಲುವು ಹೋಗಿ ನಿಜವಾದ ಬಸವತತ್ವ ಆಚರಣೆಗೆ ಬರಬೇಕು' ಎಂದರು.

ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಬಸವ ಬೆಳವಿ ಶರಣ ಬಸವ ಸ್ವಾಮೀಜಿ, ಅಕ್ಕ ಗಂಗಾಂಬಿಕಾ, ನಟಿ ಭವ್ಯಾ ಮಾತನಾಡಿದರು. ಕಲ್ಯಾಣರಾವ್ ಪಾಟೀಲ ಬರೆದಿರುವ ಡೋಹರ ಕಕ್ಕಯ್ಯ, ಸೋಮನಾಥ ಯಾಳವಾರ ಅವರ ಕುಂಬಾರ ಕಲ್ಲಯ್ಯ, ನಿಜಯೋಗಿ ಆದಯ್ಯ, ವಿಶ್ವನಾಥ ಮುಕ್ತಾ ಬರೆದಿರುವ ಮುಕ್ತೇಶ್ವರ ವಚನಗಳು, ನೀನಿಲ್ಲದೆ ನಾನಿಲ್ಲ ಗ್ರಂಥಗಳು. ರಾಜೀವ ಜುಬರೆ ರಚಿಸಿದ ವಚನ ಪ್ರಕಟಣೆಯ ಇತಿಹಾಸ ಮತ್ತು ವಚನ ಪ್ರಜ್ಞೆ, ಸ್ನೇಹಾ ಭೂಸನೂರುಮಠ ಬರೆದ ಶಂಕರ ದಾಸಿಮಯ್ಯ, ಕೆ.ಶಶಿಕಾಂತ ಬರೆದ ಹಾವನಹಾಳ ಕಲ್ಲಯ್ಯ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.

ಮಾತೆ ಗಂಗಾದೇವಿ, ಶಾಸಕರಾದ ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ಬಾಬು ವಾಲಿ, ಧನರಾಜ ತಾಳಂಪಳ್ಳಿ, ಆನಂದ ದೇವಪ್ಪ, ಶಿವರಾಜ ನರಶೆಟ್ಟಿ, ವಿರೂಪಾಕ್ಷ ಗಾದಗಿ, ಶಶಿಕಾಂತ ದುರ್ಗೆ, ಬಸವರಾಜ ಕೋರಕೆ, ರವೀಂದ್ರ ಕೊಳಕೂರ್, ವಿಶ್ವನಾಥ ಮುಕ್ತಾ, ರಾಜೀವ ಜುಬರೆ ಉಪಸ್ಥಿತರಿದ್ದರು.

ಲಿಂಗಾಯತ ಧರ್ಮ ಮಾನ್ಯಗೆ ಆಗ್ರಹಿಸಿ ನಿರ್ಣಯ

ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದಲ್ಲಿ ಭಾನುವಾರ ಸಂಭ್ರಮದಿಂದ ಸಮಾರೋಪಗೊಂಡ ಎರಡು ದಿನಗಳ ಅನುಭವ ಮಂಟಪ ಉತ್ಸವದಲ್ಲಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷರಾದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ನಾಲ್ಕು ಪ್ರಮುಖ ನಿರ್ಣಯಗಳನ್ನು ಮಂಡಿಸಿದರು.

1. ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಜಯಂತಿ ಭಾರತಾದ್ಯಂತ ಆಚರಿಸುವಂತಾಗಲು ಕೇಂದ್ರ ಸರ್ಕಾರದಿಂದ ನಿರ್ಧಾರ ತೆಗೆದುಕೊಳ್ಳಬೇಕು.

2. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು.

3. ಬಸವಕಲ್ಯಾಣವು ಬಸವಾದಿ ಶರಣರು ವಚನಗಳನ್ನು ರಚಿಸಿದ ನಾಡಾಗಿರುವ ಕಾರಣ ಇಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು.

4. ರಾಜ್ಯ ಹಾಗೂ ದೇಶದಲ್ಲಿನ ಬಸವಾದಿ ಶರಣರ ಸ್ಮಾರಕಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಸ್ವತಂತ್ರ ಸಚಿವಾಲಯ ಸ್ಥಾಪಿಸಬೇಕು.

ಕಲ್ಯಾಣಕ್ಕೆ ಕಳೆ ತಂದ ವಾರದ, ಮಾತಾಜಿ ಮರೆಯಕೂಡದು

ಬಸವಕಲ್ಯಾಣ (ಬೀದರ್ ಜಿಲ್ಲೆ): `ಕಲ್ಯಾಣದಲ್ಲಿನ ಶರಣ ಸ್ಮಾರಕಗಳನ್ನು ಗುರುತಿಸಿದ ಬಾಬಾಸಾಹೇಬ್ ವಾರದ ಹಾಗೂ ಸರ್ಕಾರದ ಸಹಾಯವಿಲ್ಲದೆ 108 ಅಡಿ ಬಸವ ಪುತ್ಥಳಿ ನಿರ್ಮಿಸಿ ಈ ಸ್ಥಳದ ಮಹತ್ವ ಹೆಚ್ಚಿಸಿದ ಮಾತೆ ಮಹಾದೇವಿ ಅವರನ್ನು ಮರೆಯಕೂಡದು' ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ನಡೆದ 45 ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದ `ಬಸವಕಲ್ಯಾಣ ವಿಕಾಸ: ಅಂದು ಇಂದು ಮುಂದು' ಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಇತಿಹಾಸ ತಿಳಿದುಕೊಂಡು ಇಲ್ಲಿನ ವಿಕಾಸಕ್ಕೆ ಶ್ರಮಿಸಿದವರನ್ನು ಸ್ಮರಿಸುವುದು ಅತ್ಯಂತ ಅಗತ್ಯ. ಆದರೆ, ಬಾಬಾಸಾಹೇಬ್ ಅವರ ಹೆಸರಲ್ಲಿ ನಗರದಲ್ಲಿ ಶಾಲೆ ಇಲ್ಲ. ರಸ್ತೆ ಇಲ್ಲ. ವೃತ್ತವಿಲ್ಲ. ಯಾವುದೇ ಪ್ರಶಸ್ತಿಯೂ ಕೊಡುವುದಿಲ್ಲ. ಅನುಭವ ಮಂಟಪದ ಕಲ್ಪನೆ ಬಿತ್ತುವುದಕ್ಕಾಗಿ ಲಿಂ.ಚನ್ನಬಸವ ಪಟ್ಟದ್ದೇವರು ಕಟ್ಟಡ ಕಟ್ಟಿದರು. ಈಗ ಸರ್ಕಾರ ದೊಡ್ಡ ಆ ಕಟ್ಟಡ ಆಗುತ್ತಿದ್ದರೂ ಮೊದಲಿನ ಮಂಟಪ ಯಾವುದೇ ಕಾರಣಕ್ಕೂ ಅಳಿಯಬಾರದು. ಶರಣ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಎಸ್.ಎಂ.ಜಾಮದಾರ ಅವರೂ ಶ್ರಮಿಸಿದ್ದಾರೆ. ಲಿಂಗಾಯತೇತರ ಮುಖ್ಯಮಂತ್ರಿಗಳೇ ಕಲ್ಯಾಣಕ್ಕೆ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ ಎಂಬುದೂ ನೆನಪಿರಲಿ' ಎಂದರು.

ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, `ಪರುಷಕಟ್ಟೆಯ ಸುತ್ತಲಿನಲ್ಲಿ ರಸ್ತೆ ನಿರ್ಮಿಸಲಾಗಿದೆ. ಹನುಮನು ಹುಟ್ಟಿದ ಕಿಷ್ಕಿಂದೆ ಯಾರಿಗೂ ಗೊತ್ತಿರಲಿಲ್ಲ. ನಾನು ಅಲ್ಲಿಗೆ ಹೋಗಿ ಯೋಜನೆ ರೂಪಿಸಿದ್ದರಿಂದ ಈಗ ತಿಂಗಳಿಗೆ ಲಕ್ಷಾಂತರ ಜನ ಅಲ್ಲಿಗೆ ಬರುತ್ತಿದ್ದಾರೆ. ಅದರಂತೆ ಬಸವಕಲ್ಯಾಣ ಕ್ಷೇತ್ರ ಸಮಿತಿ ಸ್ಥಾಪಿಸಿ ಮುಂಬರುವ ದಿನಗಳಲ್ಲಿ ಇಲ್ಲಿನ ಯಾತ್ರಿಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಹಾಗೂ ಅವರಿಗಾಗಿ ವ್ಯವಸ್ಥೆ ಕೈಗೊಳ್ಳುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ' ಎಂದರು.

ಮಾತೆ ಗಂಗಾದೇವಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಬಸವ ಬೆಳವಿ ಶರಣಬಸವ ಸ್ವಾಮೀಜಿ, ಮನಗುಂಡಿ ಬಸವಾನಂದ ಸ್ವಾಮೀಜಿ, ಶಿವಶರಣಪ್ಪ ಹುಗ್ಗೆಪಾಟೀಲ, ಸೋಮನಾಥ ಯಾಳವಾರ, ಸಂಜೀವಕುಮಾರ ಜುಮ್ಮಾ, ವೀರೇಶ ಕುಂಬಾರ ಮಾತನಾಡಿದರು.

ಸಾಹಿತಿ ಗುರುಲಿಂಗಪ್ಪ ಧಬಾಲೆ ತೊಗಲೂರು, ಡಾ.ವೇದಪ್ರಕಾಶ, ಬಸವರಾಜ ಸಿಂಧನೂರು, ಆನಂದಾ ಪಂಡಿತ ಕಾರಬಾರಿ, ಕಿರಣ ಗಾಜನೂರು ಅವರ ವಿಶೇಷ ಸನ್ಮಾನ ನಡೆಯಿತು. ವಿಶ್ವ ಬಸವಧರ್ಮ ವಿಶ್ವಸ್ಥ ಸಮಿತಿ ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ, ಮಾಲತಿ ಇವಳೆ, ಶಿವರಾಜ ಪಾಟೀಲ, ರಾಜೇಂದ್ರ ಗಂದಗೆ, ಸುರೇಶ ಚನ್ನಶೆಟ್ಟಿ ಉಪಸ್ಥಿತರಿದ್ದರು.

ಬಹುಮಾನ: ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿವರಾಜ ಪಾಟೀಲ ಇವರಿಗೆ ರೂ. 20 ಸಾವಿರ, ದ್ವಿತೀಯ ಸ್ಥಾನ ಪಡೆದ ಕಲ್ಯಾಣಮ್ಮ ಉಮೇಶಚಂದ್ರ ಹುಮನಾಬಾದ್ ಇವರಿಗೆ ರೂ. 15 ಸಾವಿರ ಮತ್ತು ತೃತೀಯ ಸ್ಥಾನ ಪಡೆದಿರುವ ಬೀದರ್ ಬಸವಗಿರಿಯ ಚನ್ನಬಸವಣ್ಣ ಅವರಿಗೆ ರೂ. 10 ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.