ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ: ರಜಾಕಾರರನ್ನು ಹಿಮ್ಮೆಟ್ಟಿಸಿದ್ದ ಅಟ್ಟರಗಾ

ಮನೆ ಮನೆಗೊಬ್ಬ ಸ್ವಾತಂತ್ರ್ಯ ಹೋರಾಟಗಾರ: ಶೌರ್ಯ ಸ್ಮಾರಕ ನಿರ್ಮಾಣಕ್ಕೆ ಆಗ್ರಹ
ಗುರುಪ್ರಸಾದ ಮೆಂಟೇ
Published : 17 ಸೆಪ್ಟೆಂಬರ್ 2024, 7:16 IST
Last Updated : 17 ಸೆಪ್ಟೆಂಬರ್ 2024, 7:16 IST
ಫಾಲೋ ಮಾಡಿ
Comments

ಹುಲಸೂರ: ಇಲ್ಲಿಗೆ ಸಮೀಪದ ಭಾಲ್ಕಿ ತಾಲ್ಲೂಕಿನ ಅಟ್ಟರಗಾ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಹೋರಾಟಗಾರರು ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ ಹೋರಾಟ ನಡೆಸಿದ್ದರು.

ಅಟ್ಟರಗಾ, ಮೆಹಕರ, ಸಾಯಗಾಂವ, ಬೋಳೆಗಾಂವ, ಮೀರಖಲ, ಗೋರಟಾ, ಗಡಿಗೌಡಗಾಂವ್, ತೊಗಲೂರ, ಮುಚಳಂಬ ಸೇರಿದಂತೆ ವಿವಿಧ ಗ್ರಾಮಗಳು ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು.

ನಿಜಾಮ ಆಳ್ವಿಕೆಯಲ್ಲಿ ಕೊಲೆ, ಸುಲಿಗೆ, ಆಸ್ತಿ ಲೂಟಿ, ಮಾನಭಂಗದಂಥ ಕೃತ್ಯಗಳು ನಡೆದಿದ್ದವು. ರಜಾಕಾರರ ಕೃತ್ಯಗಳಿಂದ ಬೇಸತ್ತ ಜನ ಆಸ್ತಿ–ಪಾಸ್ತಿಗಳನ್ನು ಬಿಟ್ಟು ಬೇರೆಡೆ ವಲಸೆ ಹೋಗುವಂಥ ದುಸ್ಥಿತಿ ನಿರ್ಮಾಣವಾಗಿತ್ತು. ನಿಜಾಮರ ದುರಾಡಳಿತ ದಿಂದ ರೊಚ್ಚಿಗೆದ್ದ ಅಟ್ಟರಗಾ ಗ್ರಾಮದ ಜನರು ನಿಜಾಮಶಾಹಿ ವಿರುದ್ಧ ರೊಚ್ಚಿಗೆದ್ದರು.

ರಜಾಕಾರರ ಪಡೆ ಪ್ರವೇಶ: ಗಡಿ ಭಾಗದಲ್ಲಿ ಬಹುತೇಕರು ಭಾರತದ ಒಕ್ಕೂಟ ಸೇರುವ ಬಯಕೆ ಹೊಂದಿದ್ದರು. ಹೋರಾಟ ಕೂಡ ನಡೆಸಿದ್ದರು. ಅವರ‌ ಕೂಗನ್ನು ಹತ್ತಿಕ್ಕಲು ನಿಜಾಮ ತನ್ನ ಖಾಸಗಿ ಸೈನ್ಯವನ್ನು ಕಳುಹಿಸಿದ.

ರಜಾಕಾರರು ಅಟ್ಟರಗಾ ಸೇರಿ ವಿವಿಧ ಗ್ರಾಮಗಳ ಮೇಲೆ ದಾಳಿ ಮಾಡಿ ಜಮೀನುಗಳಲ್ಲಿಯ ಬೆಳೆ ನಾಶ ಮಾಡಿದರು. ಲೂಟಿ, ಅತ್ಯಾಚಾರ, ದೌರ್ಜನ್ಯ ನಡೆಸಿದರು. ಇದು ಹೋರಾಟದ ಆರಂಭಕ್ಕೆ ಕಾರಣವಾಯಿತು.

ಗ್ರಾಮಸ್ಥರೆಲ್ಲ ಸೇರಿ ಹಬ್ಬ ಆಚರಿಸುತ್ತಿದ್ದಾಗ ರಜಾಕಾರರು ದಾಳಿ ಮಾಡಿದರು. ಪುರುಷರು ಊರಿನ ಒಂದು ಪಾರ್ಶ್ವಕ್ಕೆ ನಡೆದಾಗ ರಜಾಕಾರರು ಊರಿಗೆ ನುಗ್ಗಿ ಮನೆಗಳನ್ನು ಲೂಟಿ ಮಾಡಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದರು. ಹೋರಾಟಗಾರರು ಮನೆ ಮಹಡಿಯಿಂದ ರಜಾಕಾರರ ಮೇಲೆ ಕವಣೆ ಗಲ್ಲುಗಳನ್ನು ಬೀಸಿದರು. ಕಾದ ಎಣ್ಣೆ ಹಾಗೂ ಖಾರದ ಪುಡಿ ಹಾಕಿದರು. ಇದರಿ ಂದ ರಜಾಕಾರರು ಹಿಮ್ಮೆಟ್ಟಬೇಕಾಯಿತು ಎಂದು ನಮ್ಮ ತಂದೆ ಹೇಳುತ್ತಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರರ ಮಗ ಪ್ರಭಾಕರ ಗಾಯಕವಾಡ ತಿಳಿಸಿದರು.

ರಜಾಕಾರರ ವಿರುದ್ಧ ಅಟ್ಟರಗಾ ಗ್ರಾಮದ ಪುರುಷರ ಜೊತೆಗೆ ಗೋಪಾಬಾಯಿ ಅವರ ಮಹಿಳೆಯರ ತಂಡ ಕೂಡ ಹೋರಾಟಕ್ಕೆ ಶಕ್ತಿ ತುಂಬಿದರು. ದೇವಸ್ಥಾನದಲ್ಲಿ ಗಂಟೆ ಬಾರಿಸುವ ಮೂಲಕ ಹೋರಾಟದಲ್ಲಿ ಪಾಲ್ಗೊಳ್ಳಲು ಸೂಚನೆಗಳನ್ನು ನೀಡಲಾಗುತ್ತಿತ್ತು ಎಂದು ತಂದೆ ಹೇಳುತ್ತಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರರ ಮನೆತನದ ಅಣ್ಣಾರಾವ ಹಲಸೆ ಹೇಳಿದರು.

ಶೌರ್ಯ ಸ್ಮಾರಕ ನಿರ್ಮಾಣಕ್ಕೆ ಆಗ್ರಹ: ಅಟ್ಟರಗಾ ಗ್ರಾಮದಲ್ಲಿ ಶೌರ್ಯ ಸ್ಮಾರಕ ನಿರ್ಮಾಣ ಮಾಡಬೇಕು. ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ರಜಾಕಾರರ ದಾಳಿಯಿಂದ ಹಾನಿಗೊಳಗಾದ ನಂದಿ ವಿಗ್ರಹ
ರಜಾಕಾರರ ದಾಳಿಯಿಂದ ಹಾನಿಗೊಳಗಾದ ನಂದಿ ವಿಗ್ರಹ

ತಂದೆಯವರು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿವಿಧ ಗ್ರಾಮಗಳಿಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಿದ್ದರು

ಅಶೋಕ ಲಿಂಬಾಜಿರಾವ ಬಿರಾದಾರ ಸ್ವಾತಂತ್ರ್ಯ ಹೋರಾಟಗಾರರ ಮಗ

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗಾಗಿ ಅಟ್ಟರಗಾ ಗ್ರಾಮದಲ್ಲಿ ಶೌರ್ಯ ಸ್ಮಾರಕ ನಿರ್ಮಿಸಬೇಕು. ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕು

ರಾಜೇಶ್ವರ ಶಿವಾಚಾರ್ಯರು ಪೀಠಾಧಿಪತಿ ಹಿರೇಮಠ ಮೆಹಕರ ಡೋಣಗಾಪೂರ ತಡೋಳಾ

ಚಳವಳಿಯಲ್ಲಿ ಪಾಲ್ಗೊಂಡ ಕೆಲವರು ಜೈಲು ಸೇರಿದರು. ಹಲವರು ಭೂಗತರಾದರು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹಾಗೂ ಹಲವು ಹೋರಾಟಗಾರರನ್ನು ಹೊಂದಿದ್ದ ನಮ್ಮ ಗ್ರಾಮ ವೀರ ಗ್ರಾಮ ಎಂದೇ ಪ್ರಸಿದ್ಧಿ ಪಡೆದಿತ್ತು

ಪ್ರಭಾಕರ ಗಾಯಕವಾಡ ಸ್ವಾತಂತ್ರ್ಯ ಹೋರಾಟಗಾರರ ಮಗ

ಹೋರಾಟಗಾರ ಗ್ರಾಮದಲ್ಲಿ ಕೆಲಸ ನಿರ್ವಹಿಸುತ್ತಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಹೋರಾಟಗಾರರನ್ನು ಗೌರವಿಸುವ ಸಲುವಾಗಿ ಗ್ರಾಮದ ಗ್ರಂಥಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅಳವಡಿಸಿದ್ದು ಗ್ರಾಮ ಪಂಚಾಯಿತಿ ವತಿಯಿಂದ ವೀರ ಗ್ರಾಮ ಎಂದೂ ಶಿಲಾ ಶಾಸನ ಸ್ಥಾಪಿಸಲಾಗಿದೆ

ದೊಂಡಿಬಾ ಬಾಮನೆ ಪಿಡಿಒ ಅಟ್ಟರಗಾ ಗ್ರಾಮ ಪಂಚಾಯಿತಿ

25 ಜನ ಹೋರಾಟಗಾರರು

ಅಟ್ಟರಗಾ ಗ್ರಾಮದಲ್ಲಿ ಮುರಳೀಧರ ಗಾಯಕವಾಡ ನಿವೃತಿರಾವ್ ಗಾಯಕವಾಡ ಯಶವಂತರಾವ ಸಾಯಾಗಾಂವಕರ ವಿಠಲರಾವ್ ಮೊರೆ ಜನಾರ್ದನ ದೇವರಾವ್ ಸಿದ್ರಾಮಪ್ಪ ಪಾಟೀಲ ಲಿಂಬಾಜಿರಾವ ಬಿರಾದಾರ ನಿವೃತಿ ಸೂರ್ಯವಂಶಿ ಜ್ಞಾನೋಬಾ ಬಿರಾದಾರ ಸೋಪಾನರಾವ ಮೋರೆ ಅರ್ಜುನ ಗಾಯಕವಾಡ ಅರ್ಜುನ ಜಾಧವ ನಿವರ್ತಿ ಕಾರಬಾರಿ ಕಾಪಳಗಿರ ಮಹಾರಾಜ ಭಾನುದಾಸ ಪಾಟೀಲ ಯೋಗಿರಾಜ ತಳವಾಡೇ ವಸಂತರಾವ ಗಾಯಕವಾಡ ನಿವೃತಿ ಮೋರೆ ಜ್ಞಾನೋಬ ಜಾಧವ ಮುರುಳೀಧರ ಅರ್ಜುನರಾವ್ ಪಾಂಡುರಂಗ ಹಲಸೆ ಆತ್ಮರಾಮ ಮಿರಖಲೇ ಲಿಂಬಾಜಿರಾವ ಉಗಲೇ ಪುಂಡಾಜಿರಾವ ಗಾಯಕವಾಡ ಬಳಿರಾಮ ಜಾಧವ ಸೇರಿದಂತೆ ಮೊದಲಾದವರು ಹೋರಾಟ ನಡೆಸಿದರು.

ತಂದೆಯವರು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿವಿಧ ಗ್ರಾಮಗಳಿಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಿದ್ದರುಅಶೋಕ ಲಿಂಬಾಜಿರಾವ ಬಿರಾದಾರ ಸ್ವಾತಂತ್ರ್ಯ ಹೋರಾಟಗಾರರ ಮಗ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗಾಗಿ ಅಟ್ಟರಗಾ ಗ್ರಾಮದಲ್ಲಿ ಶೌರ್ಯ ಸ್ಮಾರಕ ನಿರ್ಮಿಸಬೇಕು. ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕುರಾಜೇಶ್ವರ ಶಿವಾಚಾರ್ಯರು ಪೀಠಾಧಿಪತಿ ಹಿರೇಮಠ ಮೆಹಕರ ಡೋಣಗಾಪೂರ ತಡೋಳಾ ಚಳವಳಿಯಲ್ಲಿ ಪಾಲ್ಗೊಂಡ ಕೆಲವರು ಜೈಲು ಸೇರಿದರು. ಹಲವರು ಭೂಗತರಾದರು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹಾಗೂ ಹಲವು ಹೋರಾಟಗಾರರನ್ನು ಹೊಂದಿದ್ದ ನಮ್ಮ ಗ್ರಾಮ ವೀರ ಗ್ರಾಮ ಎಂದೇ ಪ್ರಸಿದ್ಧಿ ಪಡೆದಿತ್ತುಪ್ರಭಾಕರ ಗಾಯಕವಾಡ ಸ್ವಾತಂತ್ರ್ಯ ಹೋರಾಟಗಾರರ ಮಗ ಹೋರಾಟಗಾರ ಗ್ರಾಮದಲ್ಲಿ ಕೆಲಸ ನಿರ್ವಹಿಸುತ್ತಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಹೋರಾಟಗಾರರನ್ನು ಗೌರವಿಸುವ ಸಲುವಾಗಿ ಗ್ರಾಮದ ಗ್ರಂಥಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅಳವಡಿಸಿದ್ದು ಗ್ರಾಮ ಪಂಚಾಯಿತಿ ವತಿಯಿಂದ ವೀರ ಗ್ರಾಮ ಎಂದೂ ಶಿಲಾ ಶಾಸನ ಸ್ಥಾಪಿಸಲಾಗಿದೆ

–ದೊಂಡಿಬಾ ಬಾಮನೆ ಪಿಡಿಒ ಅಟ್ಟರಗಾ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT