ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

45ನೇ ಚೆಸ್ ಒಲಿಂಪಿಯಾಡ್‌: ಭಾರತಕ್ಕೆ ಗೆಲುವು ತಂದ ಗುಕೇಶ್

Published : 19 ಸೆಪ್ಟೆಂಬರ್ 2024, 0:27 IST
Last Updated : 19 ಸೆಪ್ಟೆಂಬರ್ 2024, 0:27 IST
ಫಾಲೋ ಮಾಡಿ
Comments

ಬುಡಾಪೆಸ್ಟ್‌: ಮೊದಲ ಬೋರ್ಡ್‌ನಲ್ಲಿ ಆಡಿದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌, 80 ನಡೆಗಳನ್ನು ಕಂಡ ದೀರ್ಘ ಪಂದ್ಯದಲ್ಲಿ ಚೀನಾದ ವೀ ಯಿ ಅವರನ್ನು ಸೋಲಿಸಿದರು. ಅವರ ಈ ನಿರ್ಣಾಯಕ ಗೆಲುವಿನಿಂದಾಗಿ ಭಾರತ, 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಬುಧವಾರ ಏಳನೇ ಸುತ್ತಿನಲ್ಲಿ ಚೀನಾವನ್ನು 2.5–1.5 ಪಾಯಿಂಟ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು.

ಗುಕೇಶ್‌ ಇದುವರೆಗೆ ಆರು ಪಂದ್ಯಗಳಲ್ಲಿ ಐದು ಗೆದ್ದು, ಒಂದು ಡ್ರಾ ಮಾಡಿಕೊಂಡಿದ್ದಾರೆ. ಉಳಿದ ಮೂರು ಪಂದ್ಯಗಳು ಡ್ರಾ ಆದವು. ಪ್ರಜ್ಞಾನಂದ ಎರಡನೇ ಬೋರ್ಡ್‌ನಲ್ಲಿ ಯು ಯಾಂಗ್ವಿ ವಿರುದ್ಧ ಮೊದಲಿಗರಾಗಿ ಡ್ರಾ ಮಾಡಿಕೊಂಡರು. ಹರಿಕೃಷ್ಣ ಅವರು ವಾಂಗ್‌ ಯು ವಿರುದ್ಧ ಡ್ರಾ ಮಾಡಿಕೊಂಡರು. ಅರ್ಜುನ್‌ ಇರಿಗೇಶಿ ಹೋರಾಟ ತೋರಿದರೂ, ಬು ಷಿಯಾಂಗ್ಜಿ ಜೊತೆ ಪಾಯಿಂಟ್‌ ಹಂಚಿಕೊಳ್ಳಬೇಕಾಯಿತು. ಓಪನ್ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಭಾರತ ಅಗ್ರಸ್ಥಾನ ಉಳಿಸಿಕೊಂಡಿದೆ.

ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಭಾರತ 3–1 ರಿಂದ ಜಾರ್ಜಿಯಾ ಮೇಲೆ ಜಯಗಳಿಸಿ ಮುನ್ನಡೆ ಕಾಪಾಡಿಕೊಂಡಿದೆ. ವಂತಿಕಾ ಅಗರವಾಲ್ ಮತ್ತು ವೈಶಾಲಿ ತಮ್ಮ ಪಂದ್ಯಗಳಲ್ಲಿ ಗೆದ್ದರೆ, ಹಾರಿಕಾ ಮತ್ತು ದಿವ್ಯಾ ದೇಶಮುಖ್ ಎದುರಾಳಿಗಳ ಜೊತೆ ಡ್ರಾ ಮಾಡಿಕೊಂಡರು.

ಇನ್ನು ನಾಲ್ಕು ಸುತ್ತುಗಳು ಉಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT