ಔರಾದ್: ಮೀಸಲು ವಿಧಾನಸಭೆಗೆ ನಾಲ್ಕನೇ ಬಾರಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ ಶಾಸಕ ಪ್ರಭು ಚವಾಣ್ ಅವರು ಚರ-ಸ್ಥಿರಾಸ್ತಿ ಸೇರಿ ಒಟ್ಟು ₹8.72 ಕೋಟಿ ಆಸ್ತಿ ಹೊಂದಿದ್ದಾರೆ.

ಇಷ್ಟೊಂದು ಆಸ್ತಿ ಹೊಂದಿದ್ದರೂ ವಿವಿಧ ಬ್ಯಾಂಕ್ಗಳಿಂದ ₹54 ಲಕ್ಷ ಸಾಲ ಮಾಡಿದ್ದಾರೆ. ಅವರ ಪತ್ನಿ ಶಕುಂತಲಾ ಕೂಡ ₹2.12 ಕೋಟಿ ಮಾಲೀಕರಿದ್ದಾರೆ. ಶಾಸಕ ಚವಾಣ್ ಅವರ ಬಳಿ ನಗದು ಕೇವಲ ₹2.20 ಲಕ್ಷ ಮಾತ್ರ ಇದೆ. ಅವರ ಹೆಸರಿನಲ್ಲಿ 450 ಗ್ರಾಂ. ಬಂಗಾರ, ಪತ್ನಿ ಬಳಿ 700 ಗ್ರಾಂ ಬಂಗಾರ ಹಾಗೂ 7 ಕೆ.ಜಿ ಬೆಳ್ಳಿ ಆಭರಣಗಳಿವೆ. ವಿವಿಧ ಬ್ಯಾಂಕ್ ವಿಮೆ ಸೇರಿ ಒಟ್ಟು ₹2.75 ಕೋಟಿ ಚರಾಸ್ತಿ ಹೊಂದಿದ್ದಾರೆ. ₹42.92 ಲಕ್ಷದ ಒಂದು ಫಾರ್ಚುನರ್ ಕಾರ್ ಸೇರಿ ಒಟ್ಟು ₹76 ಲಕ್ಷ ಮೌಲ್ಯದ ನಾಲ್ಕು ಕಾರುಗಳಿವೆ.

ಬೊಂತಿ ಹಾಗೂ ಕೊಳಾರದಲ್ಲಿ ಒಟ್ಟು 30 ಎಕರೆ ಕೃಷಿ ಭೂಮಿ ಇದೆ. ಉದಗಿರ್, ಮುಕ್ರಮಬಾದ್ನಲ್ಲಿ 6000 ಚದರು ಅಡಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಮಹಾರಾಷ್ಟ್ರದ ಖಾರೆಗಾಂವ್ನಲ್ಲಿ ವಾಣಿಜ್ಯ ಕಟ್ಟಡ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.