ಬಸವಕಲ್ಯಾಣ: ಹೈದರಾಬಾದ್ ಸಂಸ್ಥಾನಕ್ಕೆ ಒಳಪಟ್ಟಿದ್ದ ಈ ಭಾಗವನ್ನು ಭಾರತದಲ್ಲಿ ವಿಲೀನಗೊಳಿಸುವುದಕ್ಕೆ ನಡೆದ ಚಳವಳಿಯಲ್ಲಿ ಆರ್ಯ ಸಮಾಜದವರ ಪಾತ್ರ ಮುಖ್ಯವಾಗಿತ್ತು.

ರಜಾಕಾರರಿಂದ ಹತರಾದವರಲ್ಲಿ ಬಸವಕಲ್ಯಾಣ ನಗರದಲ್ಲಿನ ಆರ್ಯ ಸಮಾಜದವರಾಗಿದ್ದ ಹುತಾತ್ಮ ಧರ್ಮಪ್ರಕಾಶ ಪ್ರಮುಖರಾಗಿದ್ದು, ಅವರು ಬಲಿದಾನಗೈದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಗೊಳ್ಳುತ್ತಿದೆ.

ಹೈದರಾಬಾದ್ ಸಂಸ್ಥಾನ ಪ್ರತ್ಯೇಕವಾಗಿರಲಿ ಎಂಬುದು ರಜಾಕಾರರ ಹಟವಾಗಿತ್ತು. ಹೀಗಾಗಿ ಅವರ ವಿರುದ್ಧ ಈ ಭಾಗದಲ್ಲಿನ ಊರುಗಳಲ್ಲಿ ಹೋರಾಟ ನಡೆಯಿತು. ಸ್ವಾಮಿ ರಮಾನಂದ ತೀರ್ಥರ ಹೈದರಾಬಾದ್ ಸ್ಟೇಟ್ ಕಾಂಗ್ರೆಸ್, ಆರ್ಯ ಸಮಾಜ ಪ್ರತಿನಿಧಿ ಸಭಾದವರು ಹೋರಾಟದ ಮುಂಚೂಣಿಯಲ್ಲಿದ್ದರು.

ಆದ್ದರಿಂದಲೇ ಅಂದಿನ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು,‘ಭಾರತೀಯ ಸೇನೆಯಿಂದ ಈ ಭಾಗದ ವಿಮೋಚನೆಗೆ ನಡೆದ ಆಪರೇಷನ್ ಪೋಲೊ ಕಾರ್ಯಾಚರಣೆ ಬರೀ ಮೂರು ದಿನಗಳಲ್ಲಿ ಪೂರ್ಣಗೊಳ್ಳುವುದಕ್ಕೆ ಆರ್ಯ ಸಮಾಜದವರು ಮೊದಲಿನಿಂದಲೇ ಜನರಲ್ಲಿ ಹೋರಾಟದ ಕಿಚ್ಚು ತುಂಬಿರುವುದು ಮತ್ತು ಸೈನಿಕರಿಗೆ ಈ ಕಾರ್ಯದಲ್ಲಿ ನೆರವು ನೀಡಿರುವುದು ಕಾರಣವಾಗಿದೆ’ ಎಂದು ಶ್ಲಾಘಿಸಿದ್ದರು.

ಮುಖ್ಯವೆಂದರೆ, ರಜಾಕಾರ ಸಂಘಟನೆ ಎಂದೇ ಗುರುತಿಸುತ್ತಿದ್ದ ಮಜಲೀಸ್–ಎ–ಇತ್ತೇಹಾದುಲ್ ಸಂಘಟನೆಯನ್ನು ಕಾಸಿಂ ರಜ್ವಿ ಸ್ಥಾಪಿಸಿದ್ದನು. ಭಾರತ ಸರ್ಕಾರದ ಪರ ಚಟುವಟಿಕೆಗಳನ್ನು ಇವರು ಹತ್ತಿಕ್ಕುತ್ತಿದ್ದರು. ಈ ಕಾರಣ ಅನೇಕ ಕಡೆ ದಂಗೆಗಳಾದವು. ನೂರಾರು ಜನರು ಆಸ್ತಿ ಮತ್ತು ಪ್ರಾಣ ಕಳೆದುಕೊಂಡರು. ಕಾಸಿಂ ರಜ್ವಿಯ ಸ್ವಂತ ಊರು ಈಗಿನ ಮಹಾರಾಷ್ಟ್ರದಲ್ಲಿರುವ ಲಾತೂರ್. ಅದು ಇಲ್ಲಿಂದ ಕೇವಲ 80 ಕಿ.ಮೀ ಇರುವುದರಿಂದ ರಜಾಕಾರರ ಪ್ರಭಾವ ಹೆಚ್ಚಿತ್ತು.

ದಂಗೆ, ಕೊಲೆ, ಸುಲಿಗೆಗಳು ಸಹ ಈ ಭಾಗದಲ್ಲಿ ಅಧಿಕ ಪ್ರಮಾಣದಲ್ಲಾದವು. ಅವರ ಅನ್ಯಾಯ, ಅತ್ಯಾಚಾರವನ್ನು ವಿರೋಧಿಸಿದ ಕಾರಣಕ್ಕಾಗಿ ಈ ತಾಲ್ಲೂಕಿನ ಗಡಿಯಿಂದ ಕೇವಲ 30 ಕಿ.ಮೀ ಅಂತರದಲ್ಲಿರುವ ಮಹಾರಾಷ್ಟ್ರದ ಗುಂಜೇಟಿಯಲ್ಲಿ ವೇದಪ್ರಕಾಶ ಎನ್ನುವವರು ಬಡಿಗೆ, ಕಲ್ಲುಗಳಿಂದ ಹೊಡೆದಿದ್ದರಿಂದ ಸಾವನ್ನಪ್ಪಿದರು. ನಂತರದಲ್ಲಿ ಬಸವಕಲ್ಯಾಣದ ಧರ್ಮಪ್ರಕಾಶ ಎನ್ನುವವರು ಸಹ ರಜಾಕಾರರಿಂದ ಹತರಾದರು. ಯುವಕರಿಗೆ ಲಾಟಿ ನಡೆಸುವ ತರಬೇತಿ ನೀಡಿ ಆರ್ಯ ಸಮಾಜದ ಪ್ರಚಾರಗೈದಿದಕ್ಕಾಗಿ ಕೆಲವರು ಇವರನ್ನು ಕೊಲೆಗೈದರು.

ಇವರ ಬಲಿದಾನದ ನಂತರದಲ್ಲಿ ಆರ್ಯ ಸಮಾಜದವರ ಹೋರಾಟ ಮತ್ತಷ್ಟು ತೀವ್ರಗೊಂಡಿತು. ಯುವಕರಾಗಿದ್ದ ರಾಮಾನಂದ ಲಾಡ, ಗೋಕುಲಸಿಂಗ್ ಚೌಹಾನ್, ಚಂದ್ರಕಾಂತ ಮೈತ್ರಸಕರ್, ನಿವೃತ್ತಿರಾವ್ ಜಗತಾಪ, ನರಸಿಂಗರಾವ್ ಮಹೇಂದ್ರಕರ್, ಮೋಹನಸಿಂಗ್ ಹಾಗೂ ಮತ್ತಿತರರು ನಿರಂತರವಾಗಿ ಪ್ರತಿಭಟನೆ, ಧರಣಿ ನಡೆಸಿದರು.

‘ಧರ್ಮಪ್ರಕಾಶರು ಹತರಾಗಿರುವುದು ತಾಲ್ಲೂಕಿನ ನಿರ್ಗುಡಿ, ಜಾನಾಪುರ ಮತ್ತಿತರೆ ಗ್ರಾಮಗಳಲ್ಲಿನ ಆರ್ಯ ಸಮಾಜದವರು ಸಿಡಿದೇಳುವಂತೆ ಮಾಡಿತು. ನಿರ್ಗುಡಿಯಲ್ಲಿನ 34 ಜನರು ರಾತ್ರಿ ಹಗಲೆನ್ನದೆ ನಿರಂತರ ಹೋರಾಟ ನಡೆಸಿ ರಜಾಕಾರರನ್ನು ಹಿಮ್ಮೆಟ್ಟಿಸಿರುವುದನ್ನು ಗ್ರಾಮಸ್ಥರು ಈಗಲೂ ನೆನಪಿಸುತ್ತಾರೆ’ ಎಂದು ಗ್ರಾಮದ ವಿಜಯಕುಮಾರ ಶೆಡೋಳೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.