ಚಿಟಗುಪ್ಪ: ಪಟ್ಟಣ, ತಾಲ್ಲೂಕಿನ ವಿವಿಧ ಗ್ರಾಮಗಳ ಹನುಮ ದೇಗುಲದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಹನುಮ ದೇವರಿಗೆ ಪೂಜಾ ಕಾರ್ಯಕ್ರಮಗಳು ನಡೆದವು. ದೇವರ ಮೂರ್ತಿಗಳಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ಪೂಜೆ ಸಲ್ಲಿಸಿದರು.

ಪಟ್ಟಣದ ಕುನಬಿವಾಡದ ಆಂಜನೇಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 6 ಗಂಟೆಯಿಂದ ದೇವರಿಗೆ ಅಭಿಷೇಕ, ಅಲಂಕಾರ ನಡೆದವು. ಮಹಿಳೆಯರು ಭಕ್ತಿಯಿಂದ ಹನುಮನ ತೊಟ್ಟಿಲು ತುಗುವ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆ ದೇವರ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ಭಜನಾ ತಂಡದವರಿಂದ ಭಜನೆ ಕಾರ್ಯಕ್ರಮವೂ ನಡೆಯಿತು.

ನಿರ್ಣಾ: ತಾಲ್ಲೂಕಿನ ನಿರ್ಣಾದ ಹನುಮಾನ ದೇಗುಲದಲ್ಲಿ ಮುಂಜಾನೆ ಭಕ್ತರು ದೇವರಿಗೆ ಪುಷ್ಪಾಲಂಕಾರಗೊಳಿಸಿ ಅಭಿಷೇಕ ಪೂಜೆ ಮಾಡಿದರು. ಮಹಿಳೆಯರಿಂದ ತೊಟ್ಟಿಲು ತೂಗುವ ಕಾರ್ಯ ಜರುಗಿತು.

ದೇಗುಲಗಳಿಗೆ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇತ್ತು. ಬಹುತೇಕ ಕಡೆ ಅನ್ನ ಸಂತರ್ಪಣೆ ನಡೆಯಿತು. ಗ್ರಾಮೀಣ ಭಾಗಗಳಲ್ಲಿಯೂ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ದೇಗುಲಗಳನ್ನು ಸಿಂಗರಿಸಿ, ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಗಲಗಿ, ಮಿನಕೇರಾ, ಮುತ್ತಂಗಿ, ಕುಡಂಬಲ್, ವಳಖಿಂಡಿ, ಇಟಗಾ ಗ್ರಾಮಗಳಲ್ಲಿಯ ಹನುಮ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಅನ್ನ ಸಂತರ್ಪಣೆ ಇತರ ಸೇವೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.