‘ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಪ್ರಯುಕ್ತ ಪ್ರತಿ ವರ್ಷ ಇಡೀ ರಾಜ್ಯದಲ್ಲಿ ಒಂದು ವಾರ ಸಹಕಾರ ಸಪ್ತಾಹ ಆಚರಿಸಲಾಗುತ್ತದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಕಳೆದ 71 ವರ್ಷಗಳಿಂದ ಸಹಕಾರ ಸಪ್ತಾಹ ಆಚರಿಸಿಕೊಂಡು ಬರಲಾಗುತ್ತಿದೆ. 'ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ’ ಎಂಬ ತತ್ವದಡಿ ಸಹಕಾರ ಕ್ಷೇತ್ರ ಇದೆ. ಗದುಗಿನ ಕಣಗಿನಹಾಳ ಗ್ರಾಮದಲ್ಲಿ ಆರಂಭಗೊಂಡ ಸಹಕಾರ ಚಳವಳಿ ಇಡೀ ದೇಶಕ್ಕೆ ವಿಸ್ತರಿಸಿದೆ. ಬೀದರ್ ಜಿಲ್ಲೆ ಕೂಡ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ದೇಶದ ಗಮನ ಸೆಳೆದಿದೆ ಎಂದು ಹೇಳಿದರು.
‘ನಬಾರ್ಡ್ ಸಾಲ ಪ್ರಮಾಣ ಕಡಿತ’
‘ನಬಾರ್ಡ್ ಈ ಹಿಂದೆ ರಾಜ್ಯಕ್ಕೆ ಪ್ರತಿವರ್ಷ ₹6 ಲಕ್ಷ ಕೋಟಿ ಸಾಲ ಕೊಡುತ್ತಿತ್ತು. ಈಗ ಅದನ್ನು ₹2.50 ಲಕ್ಷ ಕೋಟಿಗೆ ಇಳಿಕೆ ಮಾಡಿದೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಸಂಸದ ಸಾಗರ್ ಖಂಡ್ರೆ ಸೇರಿದಂತೆ ಇತರೆ ಸಂಸದರು ಪತ್ರ ಬರೆದು ಸಾಲದ ಪ್ರಮಾಣ ಕಡಿತ ಮಾಡದಂತೆ ಆಗ್ರಹಿಸಿದ್ದಾರೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಪ್ರತಿವರ್ಷ ನಬಾರ್ಡ್ ಸಾಲ ಕೊಡುವ ಪ್ರಮಾಣ ಹೆಚ್ಚಾಗಬೇಕು. ಅದರ ಬದಲಾಗಿ ಕಡಿತಗೊಳಿಸುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಕೂಗು ಏಳಬೇಕು. ಜನಾಭಿಪ್ರಾಯ ರೂಪುಗೊಳ್ಳಬೇಕು ಎಂದು ಹೇಳಿದರು.