ಬೀದರ್: ಇಂಡೊನೇಷ್ಯಾದಲ್ಲಿ ನಡೆದ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರು ಗ್ರಾಮದ ನಿಶಾ ತಾಳಂಪಳ್ಳಿ ’ಮಿಸ್ ಇಂಡಿಯಾ ಇಂಟರ್ನ್ಯಾಷನಲ್’ ಕಿರೀಟವನ್ನು ಗೆದ್ದುಕೊಂಡಿದ್ದಾರೆ.

‘ಬೀದರ್ ಜಿಲ್ಲೆಯ ಮಗಳು ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಸರ್ಧಿಗಳನ್ನು ಹಿಂದಿಕ್ಕುವ ಮೂಲಕ ಬೀದರ್ ಜಿಲ್ಲೆಯ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ’ ಎಂದುಎನ್ಇಕೆಆರ್ಟಿಸಿ ಹುಮನಾಬಾದ್ ಘಟಕದಲ್ಲಿ ಕ್ಯಾಷಿಯರ್ ಆಗಿರುವ ತಂದೆ ಶ್ರೀನಿವಾಸ ತಾಳಂಪಳ್ಳಿ ಖಚಿತಪಡಿಸಿದ್ದಾರೆ.

ಮಿಸ್ ಇಂಡಿಯಾ ಇಂಟರ್ನ್ಯಾಷನಲ್ 2019ರ ಮೊದಲ ಸುತ್ತಿನ ಸ್ಪರ್ಧೆಗೆದೇಶದ ವಿವಿಧೆಡೆಯ ಒಂಬತ್ತು ಸಾವಿರ ಸ್ಪರ್ಧಾಳುಗಳು ಅರ್ಜಿ ಸಲ್ಲಿಸಿದ್ದರು. ಹೈದರಾಬಾದ್ನಲ್ಲಿ ನಡೆದ ನೇರ ಸಂದರ್ಶನದಲ್ಲಿ 600 ಮಂದಿ ಚೆಲುವೆಯರನ್ನು ಪರಾಭವಗೊಳಿಸಿದ್ದರು. ಆಯ್ಕೆ ವಿಧಾನದ ಅಂತಿಮ ಸುತ್ತಿನ ಸ್ಪರ್ಧೆಯಲ್ಲೂ
30 ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವಿನ ಓಟವನ್ನು ಮುಂದುವರಿಸಿದ್ದರು.

ನವೆಂಬರ್ 14 ರಿಂದ 18ರ ವರೆಗೆ ನಡೆದ ಸೌಂದರ್ಯ ಪ್ರದರ್ಶನ ಹಾಗೂ ಸಂದರ್ಶನದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಸರ್ಧೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿದಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.