ಕಮಲನಗರ: ತಾಲ್ಲೂಕಿನ 54 ಗ್ರಾಮಗಳ ದಾಖಲಾತಿಗಳನ್ನು ಔರಾದ್ ತಾಲ್ಲೂಕಿನಿಂದ ಕಮಲನಗರ ತಾಲ್ಲೂಕಿಗೆ ವರ್ಗಾಯಿಸುವಂತೆ ಜನಪರ ಹೋರಾಟಗಾರರ ಒಕ್ಕೂಟದವರು ಮಂಗಳವಾರ ತಹಶೀಲ್ದಾರ್ ಅಮಿತ್ ಕುಮಾರ ಕುಲಕರ್ಣಿ ಅವರಿಗೆ ಮನವಿ ಮಾಡಿದರು.

ಈ ಕುರಿತು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನುಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಮಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ರಂಗರಾವ್ ಜಾಧವ, ‘ತಾಲ್ಲೂಕು ಘೋಷಣೆಯಾಗಿ ಸುಮಾರು ಆರು ವರ್ಷವಾದರೂ ಕಮಲನಗರದಲ್ಲಿ ಇನ್ನು ಸಾರ್ವಜನಿಕರ ಹಲವು ಕಾರ್ಯಗಳು ಔರಾದ್ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿವೆ. ಆದ್ದರಿಂದ ನಮ್ಮ ಸಂಕಷ್ ಅರಿತು ಆದಷ್ಟು ಬೇಗ ಕಮಲನಗರ ತಾಲ್ಲೂಕಿನ 54 ಹಳ್ಳಿಗಳ ದಾಖಲಾತಿಗಳನ್ನು ಕಮಲನಗರ ತಾಲ್ಲೂಕಿನ ಆಡಳಿತಕ್ಕೆ ವರ್ಗಾಯಿಸಬೇಕು’ ಎಂದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ ಮಾತನಾಡಿ, ‘54 ಗ್ರಾಮಗಳ ದಾಖಲೆಗಳನ್ನು ಜೂನ್ 7ರ ಒಳಗಾಗಿ ವರ್ಗಾಯಿಸದಿದ್ದರೆ ಒಕ್ಕೂಟದಿಂದ ತಹಶಿಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಬೀದರ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸಚಿನ ಅಗಾಳೆ, ತಾನಾಜಿ ಮೇತ್ರೆ ತೋರಣಾ, ಸೈಯದ್ ಮುಸಾ, ಪ್ರಶಾಂತ ಖಾನಾಪುರೆ, ಶ್ರೀ ರಂಗ ಪರಿಹಾರ, ಭೀಮರಾವ್ ಕಣಜೆ, ವಿಠಲ ಪಾಟೀಲ್ ಬಾಲೂರ, ವಿಷ್ಣುದಾಸ ಗಾಯಕವಾಡ, ನಾಗರಿಕ ಸೇವಾ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಕಟ್ಟಡ ಕಾರ್ಮಿಕರ ಸಂಘ, ವ್ಯವಸ್ಥೆ ಪರಿವರ್ತನಾ ವೇದಿಕೆ ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.