ಬೀದರ್: ಬಿರು ಬಿಸಿಲು, ಉಷ್ಣ ಹವೆಯ ನಡುವೆ ಬೀದರ್ ಲೋಕಸಭಾ ಕ್ಷೇತ್ರದ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

ನೆರೆಯ ಚಿಂಚೋಳಿ, ಆಳಂದ ಕ್ಷೇತ್ರ ಸೇರಿದಂತೆ ಕ್ಷೇತ್ರದ ಒಟ್ಟು 2,024 ಮತಗಟ್ಟೆಗಳಲ್ಲಿ 18.92 ಲಕ್ಷ ಮತದಾರರು 18 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವರು.

ಮತಗಟ್ಟೆಗಳಿಗೆ ಹೆಜ್ಜೆ

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೋಮವಾರ ನಗರದ ಬಿ.ವಿ.ಬಿ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಬಂದು ಚುನಾವಣಾ ಸಾಮಗ್ರಿಗಳೊಂದಿಗೆ ನಿಗದಿತ ಮತಗಟ್ಟೆಗಳಿಗೆ ತೆರಳಿದರು.

ಇವಿಎಂ, ವಿವಿಪ್ಯಾಟ್, ಕಂಟ್ರೋಲ್ ಯೂನಿಟ್, ಶಾಹಿ, ಒಆರ್ಎಸ್ ಪೊಟ್ಟಣ, ಮತದಾರರ ಪಟ್ಟಿಗಳೊಂದಿಗೆ ಬಸ್ಗಳ ಮೂಲಕ ಮತಗಟ್ಟೆಗಳಿಗೆ ತೆರಳಿದರು. ಇದಕ್ಕೂ ಮುನ್ನ ಸೆಕ್ಟರ್ವಾರು ಮತದಾನಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ವಿತರಿಸಲಾಯಿತು. ಸಿಬ್ಬಂದಿಗೆ ಅನ್ನ, ಸಾಂಬಾರ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸಿಬ್ಬಂದಿ ಕುಳಿತುಕೊಳ್ಳಲು ಶಾಮಿಯಾನ ಹಾಕಲಾಗಿತ್ತು. ಬಿಸಿಲು, ಉಷ್ಣ ಅಲೆಗಳಿಂದ ಸಿಬ್ಬಂದಿ ಪರದಾಟ ನಡೆಸುವುದು ಕಂಡು ಬಂತು. ಬೇಗ ಚುನಾವಣೆ ಮುಗಿದರೆ ಸಾಕು ಎನ್ನುತ್ತಿದ್ದರು.

ಚುನಾವಣೆ ಕೆಲಸಕ್ಕೆ 243 ಬಸ್ಗಳು

ಮತಗಟ್ಟೆಗಳಿಗೆ ತೆರಳಲು ಚುನಾವಣಾ ಸಿಬ್ಬಂದಿಗೆ 243 ಕೆಎಸ್ಆರ್ಟಿಸಿ ಬಸ್, 250 ಕ್ರೂಸರ್ಗಳನ್ನು ಬಾಡಿಗೆ ಮೇಲೆ ತೆಗೆದುಕೊಳ್ಳಲಾಗಿದೆ. ಈ ಪೈಕಿ ಕೆಲವು ವಾಹನಗಳನ್ನು ಚುನಾವಣಾ ಅಧಿಕಾರಿಗಳು ಗಸ್ತಿನಲ್ಲಿ ತಿರುಗಾಡಲು ಮತ್ತು ಸಿಬ್ಬಂದಿಯನ್ನು ಕೊಂಡೊಯ್ಯಲು ಬಳಸಲಾಗುತ್ತದೆ. ಈ ವಾಹನಗಳಲ್ಲಿಯೇ ಮತದಾನ ಪೂರ್ಣಗೊಂಡ ನಂತರ ಚುನಾವಣಾ ಸಿಬ್ಬಂದಿ ಇವಿಎಂಗಳನ್ನು ತೆಗೆದುಕೊಂಡು ಬೀದರ್ನ ಬಿ.ವಿ.ಬಿ ಕಾಲೇಜಿನ ಮತದಾನ ಕೇಂದ್ರಕ್ಕೆ ತೆಗೆದುಕೊಂಡು ಬರುವರು. ಪಿಆರ್ಒ, ಎಪಿಆರ್, ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು 6,896 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅದೇ ರೀತಿ 2,349 ಜನ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.

5,046 ಬ್ಯಾಲೆಟ್ ಯೂನಿಟ್, 2,743 ಕಂಟ್ರೋಲ್ ಯೂನಿಟ್ ಹಾಗೂ 2,908 ವಿವಿಪ್ಯಾಟ್ಗಳನ್ನು ಬಳಸಲಾಗುತ್ತಿದೆ.

ಆರು ವಿಶೇಷ ಮತದಾನ ಕೇಂದ್ರಗಳು

ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ವಿಶೇಷ ಮತದಾನ ಕೇಂದ್ರಗಳನ್ನು ಈ ಸಲ ಸ್ಥಾಪಿಸಲಾಗಿದೆ.

ಬೀದರ್ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪದ 104ನೇ ಮತಗಟ್ಟೆಗೆ ಬಿದ್ರಿ ಕಲೆಯ ಸ್ಪರ್ಶ ನೀಡಲಾಗಿದೆ. ಬಸವಕಲ್ಯಾಣದ ನಾರಾಯಣಪುರದ 64ನೇ ಮತಗಟ್ಟೆಗೆ ಅನುಭವ ಮಂಟಪ, ಹುಮನಾಬಾದಿನ ಹುಡಗಿಯ 135ನೇ ಮತಗಟ್ಟೆಗೆ ಜಲಸಂಗ್ವಿ ಸ್ಮಾರಕ, ಬೀದರ್ ದಕ್ಷಿಣದ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 137ನೇ ಮತಗಟ್ಟೆಗೆ ಬೀದರ್ ಕೋಟೆ, ಭಾಲ್ಕಿಯ ಟಿಎಂಸಿ ಕಚೇರಿಯ 106ನೇ ಮತಗಟ್ಟೆಗೆ ಕಾರಂಜಾ ಜಲಾಶಯ ಹಾಗೂ ಔರಾದಿನ ಸಂತಪುರಿನ 171ನೇ ಮತಗಟ್ಟೆಗೆ ಅರಣ್ಯದ ಸ್ಪರ್ಧ ನೀಡಲಾಗಿದೆ. ಮತದಾರರನ್ನು ಆಕರ್ಷಿಸಲು ಆಯ್ದ ಮತಗಟ್ಟೆಗಳಿಗೆ ಹೊಸ ರೂಪ ಕೊಡಲಾಗಿದೆ.

30 ‘ಸಖಿ’ ಮತಗಟ್ಟೆಗಳು:

ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 2024 ಮತಗಟ್ಟೆಗಳ ಪೈಕಿ 30 ‘ಸಖಿ’ ಮತಗಟ್ಟೆ ಸ್ಥಾಪಿಸಲಾಗಿದೆ. ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ ಐದು ‘ಸಖಿ’ ಮತಗಟ್ಟೆಗಳಿವೆ. ಅಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಯೇ ಕೆಲಸ ನಿರ್ವಹಿಸುತ್ತಾರೆ. ಮಹಿಳಾ ಮತದಾರರನ್ನು ಆಕರ್ಷಿಸಲು ‘ಸಖಿ’ ಮತಗಟ್ಟೆ ಸ್ಥಾಪಿಸಲಾಗಿದೆ. ಅದೇ ರೀತಿ 30 ಅಂಗವಿಕಲರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅಂಗವಿಕಲರೇ ಅವುಗಳನ್ನು ನಿರ್ವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.