ಭಾಲ್ಕಿ: ಸಮಾಜದ ಒಳಿತಿಯಲ್ಲಿ ಪತ್ರಕರ್ತರ ಶ್ರಮ ದೊಡ್ಡದಿದೆ ಎಂದು ಮೈಲಾರ ಮಲ್ಲಣ್ಣ ದೇವಸ್ಥಾನದ ಮಾಜಿ ಅಧ್ಯಕ್ಷ ಕೆ.ಡಿ.ಗಣೇಶ ಹೇಳಿದರು.

ಪಟ್ಟಣದಲ್ಲಿ ಕೆ.ಡಿ.ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣವಾಗಬೇಕು ಎನ್ನುವುದು ಬಹು ದಿನಗಳ ಬೇಡಿಕೆ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಕಾಳಜಿ ವಹಿಸಿ ಪತ್ರಿಕಾ ಭವನ ನಿರ್ಮಿಸಿ ಪತ್ರಕರ್ತರಿಗೆ ಅನುಕೂಲ ಮಾಡಿಕೊಡಬೇಕು. ಪತ್ರಕರ್ತರ ಸೇವೆಗೆ ಪ್ರೋತ್ಸಾಹ ತುಂಬುವ ಕೆಲಸ ಆಗಬೇಕು ಎಂದು ತಿಳಿಸಿದರು.

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟೆ ಹಿರಿಯ ಪತ್ರಕರ್ತ ಅಶೋಕ ರಾಜೋಳೆ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಬೋಚರೆ ಮಾತನಾಡಿದರು. ಕೆ.ಡಿ.ಫೌಂಡೇಶನ್ ಅಧ್ಯಕ್ಷೆ ಅಂಜಲಿ ಕೆ.ಡಿ.ಗಣೇಶ, ಉಪಾಧ್ಯಕ್ಷ ರಂಜಿತ ಮಳಚಾಪೂರೆ, ಖಜಾಂಚಿ ಮಾಣಿಕ ಮಳಚಾಪೂರೆ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ, ಮಾಳಸ್ಕಾಂತ ವಾಘೆ, ದೀಪಕ ಠಮಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.