ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ದು, ಸೋಯಾಬೀನ್ ಖರೀದಿಗೆ 80 ಕೇಂದ್ರ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Published : 18 ಸೆಪ್ಟೆಂಬರ್ 2024, 15:36 IST
Last Updated : 18 ಸೆಪ್ಟೆಂಬರ್ 2024, 15:36 IST
ಫಾಲೋ ಮಾಡಿ
Comments

ಬೀದರ್‌: ‘ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೀದರ್‌ ಜಿಲ್ಲೆಯಲ್ಲಿ ಒಟ್ಟು 80 ಖರೀದಿ ಕೇಂದ್ರಗಳಲ್ಲಿ ಉದ್ದು ಮತ್ತು ಸೋಯಾಬೀನ್‌ ಖರೀದಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಕೇಂದ್ರದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಉದ್ದು ಮತ್ತು ಸೋಯಾಬೀನ್ ಕಾಳುಗಳನ್ನು ಎಂಎಸ್‌ಪಿ ದರದಲ್ಲಿ ರೈತರಿಂದ ಖರೀದಿಸಲಾಗುವುದು.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ‘ಪ್ರತಿ ಕ್ವಿಂಟಲ್‌ ಉದ್ದು ₹7,400, ಸೋಯಾಬೀನ್ ಪ್ರತಿ ಕ್ವಿಂಟಲ್‌ ₹4,892 ದರದಲ್ಲಿ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಖರೀದಿಸಲಾಗುತ್ತದೆ. ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ನಾಫೆಡ್‌ ಸಂಸ್ಥೆಯನ್ನು ಖರೀದಿ ಕೇಂದ್ರವಾಗಿ ನೇಮಿಸಿ ಆದೇಶಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಖರೀದಿ ಕೇಂದ್ರಗಳು ಲಾಗ್‌ಇನ್ ಕ್ರೆಡೆನ್ಷಿಯಲ್‌ ಪಡೆದು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದ ಮೇಲೆ ರೈತರು ಸಮೀಪದ ಖರೀದಿ ಕೇಂದ್ರಗಳಿಗೆ ಹೋಗಿ ಹೆಸರು ನೋಂದಾಯಿಸಬಹುದು. ಖರೀದಿ ಪ್ರಕ್ರಿಯೆಯಲ್ಲಿ ಉದ್ದು ಪ್ರತಿ ಎಕರೆಗೆ 2 ಕ್ವಿಂಟಲ್‌ನಂತೆ ಗರಿಷ್ಠ 10 ಕ್ವಿಂಟಲ್‌ವರೆಗೆ ಮತ್ತು ಸೋಯಾಬೀನ್ ಪ್ರತಿ ಎಕರೆಗೆ 5 ಕ್ವಿಂಟಲ್‌ನಂತೆ ಗರಿಷ್ಠ 20 ಕ್ವಿಂಟಲ್‌ವರೆಗೆ ಮಾರಾಟ ಮಾಡಬಹುದು. ರೈತರಿಗೆ ಹಣ ಅವರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. ಮೂಲಕ ಸಂದಾಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT