ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಒಲಿಂಪಿಯಾಡ್‌ ಎಂಟನೇ ಸುತ್ತು: ಭಾರತಕ್ಕೆ ಮಣಿದ ಇರಾನ್

Published : 20 ಸೆಪ್ಟೆಂಬರ್ 2024, 0:30 IST
Last Updated : 20 ಸೆಪ್ಟೆಂಬರ್ 2024, 0:30 IST
ಫಾಲೋ ಮಾಡಿ
Comments

ಬುಡಾಪೆಸ್ಟ್‌: ದೊಮ್ಮರಾಜು ಗುಕೇಶ್ ಮತ್ತು ಅರ್ಜುನ್ ಇರಿಗೇಶಿ ಉತ್ತಮ ಪ್ರದರ್ಶನ ಮುಂದುವರಿಸಿದ ಪರಿಣಾಮ ಭಾರತ, 45ನೇ ಚೆಸ್‌ ಒಲಿಂಪಿಯಾಡ್‌ನ ಓಪನ್‌ ವಿಭಾಗದ ಎಂಟನೇ ಸುತ್ತಿನಲ್ಲಿ ಇರಾನ್ ತಂಡವನ್ನು ಗುರುವಾರ 3.5–0.5 ರಿಂದ ಸೋಲಿಸಿ ಅಗ್ರಸ್ಥಾನ ಉಳಿಸಿಕೊಂಡಿದೆ. ಇನ್ನು ಮೂರು ಸುತ್ತಿನ ಪಂದ್ಯಗಳು ಉಳಿದಿವೆ.

ಏಳನೇ ಪಂದ್ಯ ಆಡುತ್ತಿರುವ ಗುಕೇಶ್‌ ಮೊದಲ ಬೋರ್ಡ್‌ನಲ್ಲಿ ಬಿಳಿ ಕಾಯಿಗಳಲ್ಲಿ ಆಡಿದ ಪರ್ಹಾಮ್ ಮಘಸೂಡ್ಲು ಅವರನ್ನು 34 ನಡೆಗಳಲ್ಲಿ ಸೋಲಿಸಿದರು. ಮಧ್ಯಮ ಹಂತದಲ್ಲೇ ಅವರು ಮೇಲುಗೈ ಸಾಧಿಸಿದರು. ಎರಡನೇ ಬೋರ್ಡ್‌ನಲ್ಲಿ ಪ್ರಜ್ಞಾನಂದ ರಮೇಶಬಾಬು ಮತ್ತು ಮೊಹಮ್ಮದ್ ಅಮೀನ್ ತಬಾತಬೇಯಿ 32 ನಡೆಗಳ ನಂತರ ‘ಡ್ರಾ’ ಮಾಡಿಕೊಳ್ಳಲು ಒಪ್ಪಿದರು. ಈ ವೇಳೆ ಇಬ್ಬರೂ ಸಮಾನಬಲ ಹೊಂದಿದ್ದರು.

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅರ್ಜುನ್ ಇರಿಗೇಶಿ ಮೂರನೇ ಬೋರ್ಡ್‌ನಲ್ಲಿ ಕಪ್ಪುಕಾಯಿಗಳಲ್ಲಿ ಆಡಿ ಇರಾನ್‌ನ ದಾನೇಶ್ವರ್‌ ಬರ್ದಿಯ ಅವರನ್ನು 36 ನಡೆಗಳಲ್ಲಿ ಮಣಿಸಿದರು.  ವಿದಿತ್‌ ಎಸ್‌.ಗುಜರಾತಿ ಕೂಡ 40 ನಡೆಗಳಲ್ಲಿ ಇದಾನಿ ಪೌಯಾ ಅವರನ್ನು ಪರಾಭವಗೊಳಿಸಿ ಭಾರತದ ವಿಜಯದ ಅಂತರ ಹೆಚ್ಚಿಸಿದರು.

ಎಂಟು ಪಂದ್ಯಗಳಿಂದ ಭಾರತ 16 ಪಾಯಿಂಟ್ಸ್ ಸಂಗ್ರಹಿಸಿದೆ. ಎರಡನೇ ಸ್ಥಾನದಲ್ಲಿದ್ದ ಇರಾನ್‌ಗೆ ಇದು ಮೊದಲ ಸೋಲು.

ಮಹಿಳೆಯರ ವಿಭಾಗದಲ್ಲಿ ಭಾರತ, ಪೋಲೆಂಡ್ ವಿರುದ್ಧ ಆಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT