ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ಹಾರಕೂಡದಲ್ಲಿ ಶುಕ್ರವಾರ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಪ್ರಸಕ್ತ ಸಾಲಿನ ಶ್ರೀಚನ್ನರೇಣುಕಬಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಯೂ ₹1 ಲಕ್ಷ ನಗದು, 10 ಗ್ರಾಂ. ಬಂಗಾರದ ಪದಕ ಹಾಗೂ ಫಲಕ ಒಳಗೊಂಡಿದೆ. ಚನ್ನವೀರ ಶಿವಾಚಾರ್ಯರು ಪ್ರಶಸ್ತಿ ನೀಡಿದರು. ಶಾಸಕ ಶರಣು ಸಲಗರ, ಸಾಹಿತಿ ಮನು ಬಳಿಗಾರ, ಸಂಗಮೇಶ ಸವದತ್ತಿಮಠ, ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ.ಭಾಸ್ಕರ ಉಪಸ್ಥಿತರಿದ್ದರು.

ಪ್ರಶಸ್ತಿ ಪಡೆದ ನಂತರ ಭೈರಪ್ಪ ಮಾತನಾಡಿ, 'ಎಲ್ಲರೂ ಇಷ್ಟಪಡುವ ಸಾಹಿತ್ಯವನ್ನೇ ನಾನು ರಚಿಸಿದ್ದೇನೆ. ಯಾವುದೇ ಒಂದು ಭಾಗದ ಭಾಷೆ ಅಥವಾ ಪರಂಪರೆಗೆ ಮಾತ್ರ ಮಹತ್ವ ನೀಡಿಲ್ಲ' ಎಂದರು.
.ಕನ್ನಡ ರಥಯಾತ್ರೆಗೆ ಸಾಹಿತಿ ಎಸ್.ಎಲ್. ಭೈರಪ್ಪ ಚಾಲನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.