ಔರಾದ್ (ಬೀದರ್ ಜಿಲ್ಲೆ): ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ (ಕಮಲದ ಬ್ಯಾಡ್ಜ್) ಧರಿಸಿಕೊಂಡು ಮತಗಟ್ಟೆಗೆ ಹೋಗಿ ಮತದಾನ ಮಾಡಿದ ದೂರಿನ ಮೇರೆಗೆ ಅವರ ವಿರುದ್ಧ ಇಲ್ಲಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಗವಂತ ಖೂಬಾ ಅವರು ಮಂಗಳವಾರ ಬೆಳಿಗ್ಗೆ ಪಟ್ಟಣದ ನಾಲಂದಾ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 84ರಲ್ಲಿ ತಮ್ಮ ಕುಟುಂಬ ಸಮೇತ ಮತದಾನ ಮಾಡಲು ಬಂದಿದ್ದರು. ಈ ವೇಳೆ ಅವರ ತಮ್ಮ ಶರ್ಟ್ ಮೇಲೆ ಬಿಜೆಪಿ ಪಕ್ಷದ ಬ್ಯಾಡ್ಜ್ ಧರಿಸಿದ್ದರು. ಹಾಗೂ ಮತದಾನ ಕೇಂದ್ರದ 100 ಮೀಟರ್ ಒಳಗಡೆ ಪಕ್ಷದ ಬ್ಯಾಡ್ಜ್ ಧರಿಸಿಯೇ ಪತ್ರಕರ್ತರ ಜತೆ ಮಾತನಾಡಿದ್ದು ಪ್ರಜಾ ಪ್ರತಿನಿಧಿ ಕಾಯ್ದೆ ಸ್ಪಷ್ಟ ಉಲ್ಲಂಘನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಹಾಯಕ ಚುನಾವಣಾಧಿಕಾರಿ ನೀಡಿದ ದೂರು ಆಧರಿಸಿ ಖೂಬಾ ವಿರುದ್ಧ ಪ್ರಕರಣ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.