ಕೊಳ್ಳೇಗಾಲ: ಇಲ್ಲಿನ ಆದರ್ಶನಗರ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ದಂಪತಿ ಮೇಲೆ ನಾಲ್ವರು ಯುವಕರು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ನಗರದ ದುಷ್ಯಂತ್, ಮಹಾನ್, ನಿತಿನ್ ಅಂತೋಣಿ ಬಂಧಿತ ಯುವಕರು. ಮತ್ತೊಬ್ಬ ಆರೋಪಿ ದ್ರುವನ್ ಪರಾರಿಯಾಗಿದ್ದಾನೆ.

ಬಡಾವಣೆಯ ನಿವಾಸಿ ಖಾದರ್ ಮತ್ತು ಆತನ ಪತ್ನಿ ಹಸೀನಾ ಮನೆ ಸಮೀಪ ಹಸುಗಳನ್ನು ಮೇಯಿಸಿ ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಯುವಕರು ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ದಂಪತಿ ನಮ್ಮ ಮನೆ ಮುಂದೆ ನೀವು ಏಕೆ ಜಗಳವಾಡುತ್ತಿದ್ದೀರಿ. ಬೇರೆ ಕಡೆಗೆ ಹೋಗಿ ಎಂದು ಹೇಳಿದ್ದಾರೆ. ಇದರಿಂದ ಮೂವರು ಯುವಕರು ಖಾದರ್ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಆಕೆ ಪತ್ನಿ ಹಸೀನಾ ಅವರಿಗೂ ದೊಣ್ಣೆಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ.

ಪರಿಣಾಮ ದಂಪತಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.