ಕೊಳ್ಳೇಗಾಲ: ಇಲ್ಲಿನ ಲಿಂಗಣಾಪುರ ಬಡಾವಣೆ ನಿವಾಸಿ ನಂದೀಶ್ ಪ್ರಕರಣ ಸಂಬಂಧ ದೂರು ಪಡೆಯಲು ನಿರ್ಲಕ್ಷ್ಯವಹಿಸಿದ ಆರೋಪದಡಿ ನಗರ ಪೊಲೀಸ್ ಠಾಣೆ ಎಎಸ್ಐ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.

ಎಎಸ್‌ಐ ಶಿವಶಂಕರ್ ಹಾಗೂ ಹೆಡ್ ಕಾನ್‌ಸ್ಟೇಬಲ್ ರಘು ಅಮಾನತಾಗಿರುವ ಪೊಲೀಸರು. ಜ.6ರಂದು ಮೃತನ ಕಡೆಯವರು ನಂದೀಶ್ ಕಾಣೆಯಾಗಿರುವ ಬಗ್ಗೆ ಠಾಣೆಗೆ ದೂರು ನೀಡಲು ಬಂದಾಗ ದೂರು ಪಡೆಯದೆ ‘ನಾಳೆ ಬೆಳಿಗ್ಗೆ ಬನ್ನಿ ರಾತ್ರಿ ಸಮಯ ದೂರು ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿ ಮನೆಗೆ ವಾಪಸ್ ಕಳುಹಿಸಿದ್ದರು. ಜ 7ರಂದು ಮಹದೇವಪ್ಪ ಠಾಣೆಗೆ ಹಾಜರಾಗಿ ನಂದೀಶ್ ಮೇಲೆ ಹಲ್ಲೆ ನಡೆದಿದೆ. ಕೆಲವರು ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದರೂ ಈ ಸಮಯದಲ್ಲೂ ದೂರು ಪಡೆದಿಲ್ಲ.

ಸೆ.8ರಂದು ಮೃತನ ಸಂಬಂಧಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದರು.

ಹಣ ಬೇಡಿಕೆ ಕಾನ್ ಸ್ಟೇಬಲ್ ಅಮಾನತು: ಇಲ್ಲಿನ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾನ್ ಸ್ಟೇಬಲ್ ಮಂಜಪ್ಪ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇವೆಯಿಂದ ಅಮಾನತು ಆದೇಶ ಹೊರಡಿಸಿದರು.

ಕಾನ್‌ಸ್ಟೇಬಲ್ ಮಂಜಪ್ಪ ಡಕಾಯಿತರ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ವಾಹನ ಬಿಡುಗಡೆ ಮಾಡಲು ವಾಹನ ಮಾಲೀಕರಿಂದ ₹15 ಸಾವಿರ ಲಂಚ ಕೇಳಿದ್ದರು. ಅಲ್ಲದೆ, ಫೋನ್ ಪೇ ಮೂಲಕ ಲಂಚದ ಹಣ ಹಾಕಿಸಿಕೊಂಡಿದ್ದರು. ಜೊತೆಗೆ ಮೊಬೈಲ್‌ನಲ್ಲಿ ಅನೇಕ ಸಂಭಾಷಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.