ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ತೋಟದ ಮನೆ ಜಲಾವೃತವಾಗಿರುವುದು
ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಮನೆಗಳು ಜಲಾವೃತವಾಗಿರುವುದು
ಮುಳ್ಳೂರು ಗ್ರಾಮ ಪಂಚಾಯಿತಿ ಕಚೇರಿ ನೀರಿನಿಂದ ಜಲಾವೃತವಾಗಿದ್ದು ಶಾಸಕ ಕೃಷ್ಣಮೂರ್ತಿ ಅವರು ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು
ತೆಪ್ಪದಲ್ಲಿ ತೆರಳಿ ಕಷ್ಟ ಆಲಿಸಿದ ಶಾಸಕ
ದಾಸನಪುರ ಹಳೆಅಣಗಳ್ಳಿ ಹಾಗೂ ಹಂಪಾಪುರ ಗ್ರಾಮಕ್ಕೆ ಖುದ್ದು ತೆಪ್ಪದ ಮೂಲಕ ತೆರಳಿದ ಶಾಸಕ ಕೃಷ್ಣಮೂರ್ತಿ ಮನೆ ಮನೆಗೆ ಹೋಗಿ ಜನರ ಕಷ್ಟ ಆಲಿಸಿದರು. ಅದಲ್ಲದೆ ಸುಮಾರು ಐದು ಗಂಟೆಗೂ ಹೆಚ್ಚು ಕಾಲ ಎಲ್ಲಾ ನದಿ ಪಾತ್ರದ ಗ್ರಾಮಗಳನ್ನು ವೀಕ್ಷಿಸಿ ಹಂಪಾಪುರ ಗ್ರಾಮದಲ್ಲಿ ಹಗ್ಗದ ಸಹಾಯದಿಂದ ಗ್ರಾಮದ ಒಳಗೆ ಹೋಗಿ ಜನರೊಂದಿಗೆ ಮಾತನಾಡಿದರು. ‘ನೀರು ಗ್ರಾಮವನ್ನು ಆವರಿಸಿದೆ. ಆದರೆ ಮನೆಗಳಿಗೆ ನುಗ್ಗಿಲ್ಲ ಆ ಕಾರಣ ಯಾರೂ ಸಹ ಭಯಪಡಬೇಡಿ ಅಗ್ತಯಬಿದ್ದರೆ ಕಾಳಜಿ ಕೇಂದ್ರಕ್ಕೆ ತೆರಳಬಹುದು’ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಮುಳ್ಳೂರು ಗ್ರಾಮದಲ್ಲಿ ಸುಮಾರು 300 ಮೀಟರ್‌ಗೂ ಹೆಚ್ಚು ನೀರಿನಲ್ಲಿ ನಡೆದುಕೊಂಡು ಬಂದು ಪ್ರತಿ ಮನೆಯನ್ನು ವೀಕ್ಷಣೆ ಮಾಡಿ ಮನೆಗಳಿಗೆ ಹಾನಿಯಾದರೆ ಸೂಕ್ತ ಪರಿಹಾರವನ್ನು ಕೊಡಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕೊಳ್ಳೇಗಾಲದ ಕಾಳಜಿ ಕೇಂದ್ರದಲ್ಲಿ ಮಹಿಳೆಯರು ವಿಶ್ರಾಂತಿ ಪಡೆದರು
ಕೊಳ್ಳೇಗಾಲದ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರು ಊಟ ಮಾಡಿದರು
ಮುಳ್ಳೂರು– ಮೈಸೂರು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿರುವುದು
ಪ್ರವಾಹದಲ್ಲಿ ಸಿಲುಕಿದ ಹಸುಗಳು
ಸತ್ತೇಗಾಲದ ಹ್ಯಾಂಡ್ ಪೋಸ್ಟ್ ಗ್ರಾಮದ ಬಳಿ ಕಾವೇರಿ ನದಿಗೆ ನಿರ್ಮಿಸಿರುವ ಬೈಪಾಸ್ ಸೇತುವೆಯ ಕೆಳಗೆ ಪ್ರವಾಹಕ್ಕೆ ಹಸುಗಳು ಸಿಲುಕಿಕೊಂಡಿದೆ. ಒಂದು ವಾರದಿಂದಲೂ ಸಹ ಹಸುಗಳು ಕಾವೇರಿ ನದಿಯ ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಎಂದಿನಂತೆ ಹಸುಗಳು ಮೇವಿಗಾಗಿ ನದಿಯಲ್ಲಿ ಈಜಿಕೊಂಡು ಹೋಗಿ ತಿಟ್ಟುಗೆ (ದ್ವೀಪ) ಹೋಗಿವೆ. ನೀರಿನ ಮಟ್ಟ ಹೆಚ್ಚಾದ ಕಾರಣ 30ಕ್ಕೂ ಹೆಚ್ಚು ಹಸುಗಳು ನದಿಯಲ್ಲಿ ಸಿಲುಕಿಕೊಂಡಿದ್ದವು. ನಿತ್ಯ ಕೆಲವು ಹಸುಗಳು ಗ್ರಾಮಕ್ಕೆ ಬರುತ್ತಿವೆ.
ಕೊಳ್ಳೇಗಾಲ ಸಮೀಪದ ಹಳೇಅಣಗಳ್ಳಿ ಹೊರ ವಲಯಗಳಲ್ಲಿ ಹಸುಗಳನ್ನು ಕಟ್ಟಿ ಹಾಕಿರುವುದು