ಕೊಳ್ಳೇಗಾಲದ ಆರ್‌ಎಂಸಿ ಮುಖ್ಯ ರಸ್ತೆಯಲ್ಲಿ ಬೀದಿ ದನಗಳು ಮಲಗಿರುವುದು
ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಲಗಿರುವ ಬಿಡಾಡಿ ದನ
ದನಗಳನ್ನು ಬೀದಿಗೆ ಬಿಡುವುದೇಕೆ
‘ಬಿಡಾಡಿ ದನಗಳಿಗೆ ಮಾಲೀಕರು ಇದ್ದು ನಿತ್ಯ ಬೆಳಿಗ್ಗೆ ಹಾಲು ಕರೆದು ದನಗಳನ್ನು ಬೀದಿಗೆ ಬಿಡಲಾಗುತ್ತದೆ. ಕೊಟ್ಟಿಗೆಯಲ್ಲಿ ಕಟ್ಟಿದರೆ ಬೆಳಿಗ್ಗಿನಿಂದ ಸಂಜೆಯವರೆಗೂ ಮೇವು ನೀರು ಸೇರಿದಂತೆ ನಿರ್ವಹಣೆಗೆ ಒಬ್ಬರ ಅವಶ್ಯಕತೆಯೂ ಇರುವುದರಿಂದ ಮಾಲೀಕರು ದನಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಸಾರ್ವಜನಿಕರು ರಸ್ತೆಗೆ ತಂದು ಸರಿಯುವ ಹಸಿ ತ್ಯಾಜ್ಯ ಹೂವು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ರಾಶಿಯಾಗಿ ಬೀಳುವ ತ್ಯಾಜ್ಯವೇ ಬಿಡಾಡಿ ದನಗಳ ಪ್ರಮುಖ ಆಹಾರ. ಬೆಳಿಗ್ಗಿನಿಂದ ಸಂಜೆಯವರೆಗೂ ಬೀದಿಗಳನ್ನು ಸುತ್ತುವ ದನಗಳು ಕತ್ತಲಾಗುತ್ತಿದ್ದಂತೆ ಮನೆಯ ಹಾದಿ ಹಿಡಿಯುತ್ತವೆ. ಕೆಲವು ಸಲ ಮಾಲೀಕರೇ ಸಂಜೆ ದನಗಳನ್ನು ಮನೆಗೆ ಎಳೆದೊಯ್ಯುತ್ತಾರೆ.
ಜಾನುವಾರು ಜೀವಕ್ಕೂ ಕಂಟಕ
‘ನಿತ್ಯ ನಗರದ ಜನವಸತಿ ಪ್ರದೇಶ ಹೋಟೆಲ್ ರೆಸ್ಟೋರೆಂಟ್ ಮಾರುಕಟ್ಟೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ ಪ್ಲಾಸ್ಟಿಕ್ ಕವರ್‌ಗಳ ಸಹಿತ ಜಾನುವಾರುಗಳ ಹೊಟ್ಟೆ ಸೇರುತ್ತಿವೆ. ಕವರ್‌ನೊಳಗೆ ಕಟ್ಟಿ ಎಸೆಯುವ ಹಸಿ ತ್ಯಾಜ್ಯವನ್ನು ತಿನ್ನುವ ಭರದಲ್ಲಿ ಅಪಾಯಕಾರಿ ಪ್ಲಾಸ್ಟಿಕ್ ಕವರ್‌ಗಳನ್ನೂ ಬಿಡಾಡಿ ದನಗಳು ಸೇವಿಸುತ್ತಿವೆ. ಈಚೆಗೆ ಮಾರುಕಟ್ಟೆ ಬಳಿ ದನವೊಂದು ಹೊಟ್ಟೆ ಉಬ್ಬರಿಸಿ ಮೃತಪಟ್ಟಾಗ ದೇಹದೊಳಗೆ ಐದಾರು ಕೆ.ಜಿ ಪ್ಲಾಸ್ಟಿಕ್ ಕವರ್‌ಗಳು ಜೀರ್ಣವಾಗದೆ ಉಳಿದಿತ್ತು ಎನ್ನುತ್ತಾರೆ’ ಮಾರುಕಟ್ಟೆಯ ವ್ಯಾಪಾರಿ ರಫೀಕ್.