ಯಳಂದೂರು: 550 ಚ.ಕಿ.ಮೀ ವ್ಯಾಪ್ತಿಯಲ್ಲಿ ಕಾಡು ಯಳಂದೂರು ವಿಭಾಗದದಲ್ಲಿ 40 ಹುಲಿಗಳು ವಾಸ ಹುಲಿಗಳ ವಂಶಾಭಿವೃದ್ಧಿಗೆ ಪೂರಕ ವಾತಾವರಣ
ಅಂತರರಾಷ್ಟ್ರೀಯ ಹುಲಿ ದಿನ
ಇಂದು ಅಂತರರಾಷ್ಟ್ರೀಯ ಹುಲಿ ದಿನವನ್ನು 2010 ಜು 29ರಿಂದ ಆಚರಿಸಲಾಗುತ್ತಿದೆ. ಜಾಗತಿಕವಾಗಿ ಅಳಿಯುತ್ತಿರುವ ಹುಲಿ ಸಂತತಿಯನ್ನು ಉಳಿಸಲು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಹುಲಿ ಶೃಂಗ ಸಭೆ ನೆರವಾಯಿತು. 13 ದೇಶಗಳು ಹುಲಿ ರಕ್ಷಣಾ ಅಗತ್ಯದ ಬಗ್ಗೆ ಉಪಕ್ರಮ ಆರಂಭಿಸಿದವು. ಇದರ ಫಲವಾಗಿ ಇಂದು ವನ್ಯಜೀವಿ ಕಾಯ್ದೆಗಳು ರೂಪುಗೊಂಡಿವೆ. ಹುಲಿ ಬೇಟೆ ಕಳ್ಳ ಸಾಗಣೆ ಮೂಳೆ ಕೂದಲು ಚರ್ಮ ಮತ್ತಿತರ ಭಾಗಗಳನ್ನು ಹೊಂದುವುದು 1972ರ ವನ್ಯಜೀವಿ (ರಕ್ಷಣಾ) ಕಾಯ್ದೆ ನಿರ್ಬಂಧಿಸಿದೆ.