ನಾಲ್ಕು ದಿನ ಹಬ್ಬ ಆಚರಿಸಿದರೂ ಮೂರನೇ ದಿನದ ಆಚರಣೆಯೇ ವಿಶೇಷ. ‘ಸಂಕ್ರಾಂತಿ ಹಬ್ಬದಲ್ಲಿ ನಾವು ಗೋವುಗಳಿಗೆ ವಿಶೇಷ ಪ್ರಾತಿನಿಧ್ಯ ನೀಡುತ್ತೇವೆ. ನಾಲ್ಕೂ ದಿನಗಳಲ್ಲಿ ಗೋವುಗಳ ಹಬ್ಬವೇ ನಮಗೆ ವಿಶೇಷ. ಹಬ್ಬದ ವೇಳೆಗೆ ನಾವು ಬೆಳೆದ ಬೆಳೆಗಳನ್ನು ಕೊಯ್ಲು ಮಾಡಿ ಒಕ್ಕಣೆ ಮಾಡಿರುತ್ತೇವೆ. ವರ್ಷ ಪೂರ್ತಿ ನಮಗಾಗಿ ದುಡಿಯುವ ಗೋವುಗಳಿಗೆ ಈ ಸಂದರ್ಭದಲ್ಲಿ ಜಳಕ ಮಾಡಿಸಿ ವಿವಿಧ ಹೂ ಗಳಿಂದ ಸಿಂಗರಿಸಿ ಅವುಗಳಿಗೆ ಸಿಹಿ ಖಾದ್ಯಗಳನ್ನು ನೀಡಿ (ಕಬ್ಬು ಸಿಹಿ ಪೊಂಗಲ್ ಬೆಲ್ಲ ಇನ್ನಿತರ) ತೃಪ್ತಿಯಾಗುವಷ್ಟು ತಿನ್ನಿಸುತ್ತೇವೆ’ ಎಂದು ಅರಬಗೆರೆ ಗ್ರಾಮದ ರೈತ ಮುನಿಮಾರ ‘ಪ್ರಜಾವಾಣಿ’ಗೆ ತಿಳಿಸಿದರು.