ಬಾಗೇಪಲ್ಲಿ: ಆಂಧ್ರಪ್ರದೇಶದ ಗಡಿಯ ಹೊಂದಿಕೊಂಡಿರುವ ಮತ್ತು ತೆಲುಗಿನ ದಟ್ಟ ಪ್ರಭಾವವಿರುವ ತಾಲ್ಲೂಕು ಬಾಗೇಪಲ್ಲಿ. ಇಂತಹ ಕಡೆ ಕನ್ನಡವನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಐದು ದಶಕಗಳಿಂದ ಕೆಲಸ ಮಾಡುತ್ತಿದೆ ‘ಕನ್ನಡ ಕಲಾ ಸಂಘ’

1970ರಲ್ಲಿ ಅಂದಿನ ಕವಿಗಳು, ಸಾಹಿತಿಗಳು, ಶಿಕ್ಷಕರು ‘ಕನ್ನಡ ಕಲಾ ಸಂಘ’ ಕಟ್ಟಿದರು. ನಾಟಕಗಳು, ಬೀದಿನಾಟಕಗಳ ಮೂಲಕ ಗಡಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಉಳಿಸಲು ಶ್ರಮಿಸಿದರು.

ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ 1970 ನ.1 ರಂದು ಕನ್ನಡ ಕಲಾ ಸಂಘಕ್ಕೆ ಚಾಲನೆ ದೊರೆಯಿತು. ಚಿಕ್ಕಪ್ಪಯ್ಯ, ಬಿ.ನಾರಾಯಣಸ್ವಾಮಿ, ಖಾಜಾಪೀರ್, ಸ.ಉದಯಕುಮಾರ್, ಪದ್ಮನಾಭ ತಂತ್ರಿ, ಬಾ.ನಾ ರಘು, ಬಾಮಾನಾ ಆರಾಧ್ಯ, ಶ್ರೀರಾಮಚಂದ್ರ, ಎಸ್.ವಿ.ಕೃಷ್ಣಮೂರ್ತಿ, ಕೆ.ಎಂ.ನಯಾಜ್ ಅಹಮದ್, ನಾರಾಯಣಾಚಾರಿ, ಮುನಿರಾಮಯ್ಯ, ಕೃಷ್ಣಮೂರ್ತಿ, ನಾಗರಾಜ್ (ಓಂಕಾರ ಪ್ರಿಯ), ಗಣೇಶ್ ಭಟ್, ನಂಜುಂಡಭಟ್ಟ ಅವರು ಕನ್ನಡ ಕಲಾ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ.

ಪ್ರತಿ ಬುಧವಾರ ಕನ್ನಡ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕವಿ ಬಿ.ಆರ್.ಲಕ್ಷ್ಮಣರಾವ್, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಗೂಳೂರು ನಿಡುಮಾಮಿಡಿ ಮಹಾಸಂಸ್ಥಾನದ ಜಚನಿ ಸ್ವಾಮೀಜಿ, ವೀರಭದ್ರ ಚನ್ನಮಲ್ಲ ಸ್ವಾಮೀಜಿ, ವರನಟ ರಾಜಕುಮಾರ್, ಉದಯಕುಮಾರ್, ಅನಂತನಾಗ್, ಜಯಂತಿ, ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಸೇರಿದಂತೆ ಅನೇಕ ಕವಿಗಳು, ಸಾಹಿತಿಗಳು, ಗಣ್ಯರು ಮುಖ್ಯಅತಿಥಿಗಳಾಗಿ ಇಲ್ಲಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಬಾಗೇಪಲ್ಲಿಯ ಮುಖ್ಯರಸ್ತೆಗೆ ಡಿ.ವಿ.ಗುಂಡಪ್ಪ ರಸ್ತೆ, ಮುಖ್ಯವೃತ್ತಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರು, ಗೂಳೂರು ರಸ್ತೆಗೆ ಜಚನಿ ರಸ್ತೆ ಎಂದು ನಾಮಕರಣ ಮಾಡುವಲ್ಲಿ ಈ ಸಂಘದ ಪಾತ್ರ ಪ್ರಮುಖವಾಗಿದೆ.

1983 ರಲ್ಲಿ ಸಂಘಕ್ಕೆ 12 ವರ್ಷದ ದಶಮಾನೋತ್ಸವದ ಸವಿನೆನಪಿಗಾಗಿ ‘ಭಾಗ್ಯ ಕುಸುಮ’ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗಿದೆ. ಮನೆಗೊಂದು ಕನ್ನಡ ಪುಸ್ತಕ, ಮನೆಗೊಂದು ಗಿಡ ಕಾರ್ಯಕ್ರಮಗಳನ್ನು ಸಂಘದ ಪ್ರಮುಖ ಕಾರ್ಯಕ್ರಮಗಳು. ಪ್ರತಿ ಹುಣ್ಣಿಮೆ ದಿನ ಬೆಳಂದಿಗಳ ಭೋಜನಕೂಟ, ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಹೀಗೆ ತೆಲುಗು ಭಾಷೆಯ ಪ್ರಭಾವದ ಗಡಿ ತಾಲ್ಲೂಕಿನಲ್ಲಿ ಕನ್ನಡ ಕಲಾ ಸಂಘ ನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದೆ.

‘ನಾನು ಪಿಯುಸಿ ವಿದ್ಯಾರ್ಥಿಯಾಗಿದ್ದೆ. ಅಂದಿನಿಂದಲೂ ಸಂಘದಲ್ಲಿ ಸಕ್ರಿಯವಾಗಿದ್ದೇನೆ. ತೆಲುಗು ಪ್ರಭಾವದ ನಡುವೆ ಕನ್ನಡ ಉಳಿಸಲು, ಬೆಳೆಸಲು ಕನ್ನಡ ಕಲಾ ಸಂಘ ಕಟ್ಟಿದ ಮಹನೀಯರ ನೆನಪು ಎಂದಿಗೂ ಸ್ಮರಣೀಯ’ ಎಂದು ಪ್ರಾಧ್ಯಾಪಕ ಕೆ.ಎಂ.ನಯಾಜ್ ಅಹಮದ್ ನೆನಪಿಸಿಕೊಳ್ಳುವರು.

‘ಸಭೆ, ಸಮಾರಂಭಗಳು ಮಾಡಿದರೆ ಜನರು ಬರಲಿಲ್ಲ. ಇದರಿಂದ ಕನ್ನಡದ ಹಾಸ್ಯ, ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಮಾಡುವ ಮೂಲಕ ಜನರನ್ನು ಆಕರ್ಷಣೆ ಮಾಡಿದೆವು. ಸದಸ್ಯರೇ ತಲಾ ₹ 5 ಹಾಕಿಕೊಂಡು ಕಾರ್ಯಕ್ರಮಗಳು ಮಾಡಿದ್ದೇವೆ’ ಎಂದು ಕನ್ನಡ ಕಲಾ ಸಂಘದ ಹಿರಿಯ ಸದಸ್ಯ ಖಾಜಾಫೀರ್ ತಿಳಿಸಿದರು.

ರಸಮಂಜರಿ ಕಾರ್ಯಕ್ರಮಕ್ಕೆ ಜನರು ಕಿಕ್ಕಿರಿದು ಸೇರುತ್ತಾರೆ. ಆದರೆ ಕನ್ನಡದ ಸಭೆ, ಸಮಾರಂಭಗಳು ಬರುವುದಿಲ್ಲ. ಗಡಿಯಲ್ಲಿ ಕನ್ನಡದ ಕಾರ್ಯಕ್ರಮಗಳು ಹೆಚ್ಚು ಆಗಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಜಿ.ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.