ನವದೆಹಲಿ: 2025ರ ಆವೃತ್ತಿಗೂ ಮುನ್ನ ಐಪಿಎಲ್ ತಂಡಗಳು ತಾವು ಉಳಿಸಿಕೊಳ್ಳುವ ಹಾಗೂ ಹರಾಜಿಗೆ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯನ್ನು ಹಂಚಿಕೊಂಡಿವೆ. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.

ಐಪಿಎಲ್ ತಂಡಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಇಂದು (ಗುರುವಾರ) ಸಂಜೆ 5ರೊಳಗೆ ಬಿಡುಗಡೆ ಮಾಡಬೇಕಿತ್ತು.

2024ರ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಬಿಡುಗಡೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳೂ ತಮ್ಮ ನಾಯಕರಾಗಿದ್ದ ರಿಷಭ್ ಪಂತ್ ಮತ್ತು ಕೆ.ಎಲ್.ರಾಹುಲ್ ಅವರನ್ನು ಹರಾಜಿಗೆ ಬಿಡುಗಡೆ ಮಾಡಿವೆ.

ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಹೊರಗಿಟ್ಟಿದೆ. ಏತನ್ಮಧ್ಯೆ, ಎಂ.ಎಸ್. ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ನಲ್ಲೇ ಉಳಿದುಕೊಂಡಿದ್ದಾರೆ. ಅವರು ಕಳೆದ ಐದು ವರ್ಷಗಳಿಂದ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದಿರುವ ಕಾರಣ 'ಅನ್ಕ್ಯಾಪ್ಡ್ ಪ್ಲೇಯರ್' ಆಗಿ ಕಣಕ್ಕಿಳಿಯಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವಿರಾಟ್ ಕೊಹ್ಲಿ (₹ 21 ಕೋಟಿ), ರಜತ್ ಪಾಟಿದಾರ್ (₹ 11 ಕೋಟಿ) ಹಾಗೂ ಯಶ್ ದಯಾಳ್ (₹ 5 ಕೋಟಿ) ಅವರನ್ನು ಉಳಿಸಿಕೊಂಡಿದೆ.

ಹತ್ತೂ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್

ಋತುರಾಜ್ ಗಾಯಕವಾಡ್ – ₹ 18 ಕೋಟಿ

ರವೀಂದ್ರ ಜಡೇಜ – ₹ 18 ಕೋಟಿ

ಮಥೀಷಾ ಪಥಿರಾಣ – ₹ 13 ಕೋಟಿ

ಶಿವಂ ದುಬೆ – ₹ 12 ಕೋಟಿ

ಎಂ.ಎಸ್.ಧೋನಿ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್

ಅಕ್ಷರ್ ಪಟೇಲ್ – ₹ 16.50 ಕೋಟಿ

ಕುಲದೀಪ್ ಯಾದವ್ – ₹ 13.25 ಕೋಟಿ

ಟ್ರಿಸ್ಟನ್ ಸ್ಟಬ್ಸ್ – ₹ 10 ಕೋಟಿ

ಅಭಿಷೇಕ್ ಪೊರೇಲ್ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ಗುಜರಾತ್ ಟೈಟನ್ಸ್

ರಶೀದ್ ಖಾನ್ – ₹ 18 ಕೋಟಿ

ಶುಭಮನ್ ಗಿಲ್ – ₹ 16.50 ಕೋಟಿ

ಸಾಯಿ ಸುದರ್ಶನ್ – ₹ 8.50 ಕೋಟಿ

ರಾಹುಲ್ ತೆವಾಟಿಯಾ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ಶಾರುಖ್ ಖಾನ್ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ರಾಜಸ್ಥಾನ ರಾಯಲ್ಸ್

ಸಂಜು ಸ್ಯಾಮ್ಸನ್ – ₹ 18 ಕೋಟಿ

ಯಶಸ್ವಿ ಜೈಸ್ವಾಲ್ – ₹ 18 ಕೋಟಿ

ರಿಯಾನ್ ಪರಾಗ್ – ₹ 14 ಕೋಟಿ

ಧೃವ್ ಜುರೇಲ್ – ₹ 14 ಕೋಟಿ

ಶಿಮ್ರೋನ್ ಹೆಟ್ಮೆಯರ್ – ₹ 11 ಕೋಟಿ

ಸಂದೀಪ್ ಶರ್ಮಾ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ಸನ್ರೈಸರ್ಸ್ ಹೈದರಾಬಾದ್

ಹೆನ್ರಿಚ್ ಕ್ಲಾಸೆನ್ – ₹ 23 ಕೋಟಿ

ಪ್ಯಾಟ್ ಕಮಿನ್ಸ್ – ₹ 18 ಕೋಟಿ

ಅಭಿಷೇಕ್ ಶರ್ಮಾ – ₹ 14 ಕೋಟಿ

ಟ್ರಾವಿಸ್ ಹೆಡ್ – ₹ 14 ಕೋಟಿ

ನಿತೀಶ್ ರೆಡ್ಡಿ – ₹ 6 ಕೋಟಿ

ಕೋಲ್ಕತ್ತ ನೈಟ್ ರೈಡರ್ಸ್

ರಿಂಕು ಸಿಂಗ್ – ₹ 13 ಕೋಟಿ

ಸುನಿಲ್ ನಾರಾಯಣ್ – ₹ 12 ಕೋಟಿ

ಆ್ಯಂಡ್ರೆ ರಸೆಲ್ – ₹ 12 ಕೋಟಿ

ವರುಣ್ ಚಕ್ರವರ್ತಿ – ₹ 12 ಕೋಟಿ

ರಮಣ್ದೀಪ್ ಸಿಂಗ್ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ಹರ್ಷಿತ್ ರಾಣಾ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ಮುಂಬೈ ಇಂಡಿಯನ್ಸ್

ಜಸ್ಪ್ರಿತ್ ಬೂಮ್ರ – ₹ 18 ಕೋಟಿ

ಹಾರ್ದಿಕ್ ಪಾಂಡ್ಯ – ₹ 16.35 ಕೋಟಿ

ಸೂರ್ಯಕುಮಾರ್ ಯಾದವ್ – ₹ 16.35 ಕೋಟಿ

ರೋಹಿತ್ ಶರ್ಮಾ – ₹ 16.30 ಕೋಟಿ

ತಿಲಕ್ ವರ್ಮಾ – ₹ 8 ಕೋಟಿ

ಪಂಜಾಬ್ ಕಿಂಗ್ಸ್

ಶಶಾಂಕ್ ಸಿಂಗ್ (ಅನ್ಕ್ಯಾಪ್ಡ್ ಪ್ಲೇಯರ್) ₹ 5.5 ಕೋಟಿ

ಪ್ರಭ್ಸಿಮ್ರನ್ ಸಿಂಗ್ (ಅನ್ಕ್ಯಾಪ್ಡ್ ಪ್ಲೇಯರ್) ₹ 4 ಕೋಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ – ₹ 21 ಕೋಟಿ

ರಜತ್ ಪಾಟಿದಾರ್ – ₹ 11 ಕೋಟಿ

ಯಶ್ ದಯಾಳ್ (ಅನ್ಕ್ಯಾಪ್ಡ್ ಪ್ಲೇಯರ್) – ₹ 5 ಕೋಟಿ

ಲಖನೌ ಸೂಪರ್ ಜೈಂಟ್ಸ್

ನಿಕೋಲಸ್ ಪೂರನ್ – ₹ 21 ಕೋಟಿ

ರವಿ ಬಿಷ್ಣೋಯಿ – ₹ 11 ಕೋಟಿ

ಮಯಾಂಕ್ ಯಾದವ್ – ₹ 11 ಕೋಟಿ

ಆಯುಷ್ ಬಡೋನಿ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ಮೊಹ್ಸಿನ್ ಖಾನ್ (ಅನ್ಕ್ಯಾಪ್ಡ್ ಪ್ಲೇಯರ್) – ₹ 4 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.