ಚಿಕ್ಕಬಳ್ಳಾಪುರ: ತೀವ್ರ ಕುತೂಹಲವಿದ್ದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗರಿಷ್ಠ ಮತ ಪಡೆದಿದ್ದಾರೆ.

ಮತದಾರರ ಪಟ್ಟಿಯಲ್ಲಿ ಇಬ್ಬರು ವಿಧಾನ ಪರಿಷತ್ ಸದಸ್ಯರನ್ನು ಸೇರಿಸಿರುವ ವಿಚಾರ ಹೈಕೋರ್ಟ್ ನಲ್ಲಿ ಇರುವ ಕಾರಣ ಚುನಾವಣಾ ಅಧಿಕಾರ ಫಲಿತಾಂಶ ಘೋಷಿಸಿಲ್ಲ.
.ಚಿಕ್ಕಬಳ್ಳಾಪುರ | ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ನಗರಸಭೆ ಆವರಣದಲ್ಲಿ ಹೈಡ್ರಾಮಾ.
ಮತದಾನದ ಪ್ರಕ್ರಿಯೆಗಳನ್ನು ಹೈಕೋರ್ಟ್ ಗೆ ಸಲ್ಲಿಸಲಾಗುವುದು. ಫಲಿತಾಂಶ ಘೋಷಣೆಯನ್ನು ಹೈಕೋರ್ಟ್ ನಿರ್ಧರಿಸುತ್ತದೆ ಎಂದು ಚುನಾವಣಾ ಅಧಿಕಾರಿಯೂ ಆದ ಉಪವಿಭಾಗಾಧಿಕಾರಿ ಅಶ್ವಿನ್ ಕುಮಾರ್ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗಜೇಂದ್ರ, ಉಪಾಧ್ಯಕ್ಷ ಸ್ಥಾನಕ್ಕೆ ಜೆ.ನಾಗರಾಜ್ ಸ್ಪರ್ಧಿಸಿದ್ದರು. ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಅಂಬರೀಷ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀನಾಕ್ಷಿ ವೆಂಕಟೇಶ್ ಸ್ಪರ್ಧೆ ಮಾಡಿದ್ದರು.

ಬಿಜೆಪಿಯ ಗಜೇಂದ್ರ 19, ನಾಗರಾಜ್ 20 ಮತಗಳನ್ನು ಪಡೆದರು. ಕಾಂಗ್ರೆಸ್ ನ ಅಂಬರೀಷ್ 16 ಮತ್ತು ಮೀನಾಕ್ಷಿ 15 ಮತ ಪಡೆದರು.
.ಚಿಕ್ಕಬಳ್ಳಾಪುರ: ಪರಿಷತ್ ಸದಸ್ಯರಾದ ಸೀತಾರಾಂ, ಅನಿಲ್ ಮತ ಎಣಿಕೆಗೆ ಹೈಕೋರ್ಟ್ ತಡೆ.
ಕಾಂಗ್ರೆಸ್ ನ ಆರು ಮಂದಿ ಸದಸ್ಯರು ಬಿಜೆಪಿ ಬೆಂಬಲಿಸಿದ್ದಾರೆ. ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಸಂಭ್ರಮಾಚರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.