ಗೌರಿಬಿದನೂರು: ನಗರದ ಇಡಗೂರು ರಸ್ತೆಯಲ್ಲಿರುವ ಬ್ರದರ್ಸ್ ಕೆಫೆ, ಆರಂಭವಾದ ಕೆಲವೇ ತಿಂಗಳುಗಳಲ್ಲಿ ಆಹಾರ ಪ್ರಿಯರ ನೆಚ್ಚಿನ ತಾಣವಾಗಿದೆ.

ಕೆಲಸ ಒತ್ತಡದ ನಡುವೆ ಪ್ರಶಾಂತವಾದ ವಾತಾವರಣದಲ್ಲಿ ತಿಂಡಿ, ಕಾಫಿ ಸವಿಯಲು ಬೆಳಗ್ಗೆ ಮತ್ತು ಸಾಯಂಕಾಲ ತಿಂಡಿ ಪ್ರಿಯರ ದಂಡು ಆಗಮನವಾಗುತ್ತದೆ.

ಕಡಿಮೆ ದರದಲ್ಲಿ ಉತ್ತಮವಾದ ರುಚಿ ಮತ್ತು ಶುಚಿಯಾದ ತಿಂಡಿ ತಿನಿಸುಗಳು ದೊರೆಯುವುದರಿಂದ ಮತ್ತು ಪ್ರಶಾಂತವಾದ ಹಾಗೂ ಆಹ್ಲಾದಕರ ವಾತಾವರಣ ಇರುವುದರಿಂದ ಹೆಚ್ಚು ಸಮಯ ಕಳೆಯಲು ತಿಂಡಿ ಪ್ರಿಯರು ಇಚ್ಚಿಸುತ್ತಾರೆ.

ಬೆಳಗಿನ ತಿಂಡಿಗಳಾದ ಇಡ್ಲಿ, ಪಲಾವ್, ರೈಸ್ಬಾತ್, ಕಾಫಿ, ಟೀ, ಸಾಯಂಕಾಲ ಸ್ನಾಕ್ಸ್, ತಂಪು ಪಾನೀಯಗಳು, ಚಾಟ್ಸ್ ಸೂಪ್ಸ್, ಸ್ಯಾಂಡ್ ವಿಚೆಸ್ ಹೀಗೆ ಹಲವಾರು ಬಗೆಯ ತಿನಿಸುಗಳು ದೊರೆಯುವುದರಿಂದ ಜನರು ಮಕ್ಕಳೊಂದಿಗೆ ಬಂದು ಹೆಚ್ಚಿನ ಕಾಲ ಕಳೆಯಲು ಇಷ್ಟಪಡುತ್ತಾರೆ.

ಕೆಲಸಕ್ಕಾಗಿ ಬೇರೆಡೆ ಅಲೆದಾಡಿ ನಂತರ ಸ್ವಂತ ಕೆಲಸ ಆರಂಭಿಸಬೇಕೆಂದು ಅಣ್ಣ ತಮ್ಮಂದಿರಾದ ಸಂತೋಷ್ ಮತ್ತು ನವೀನ್ ಸ್ವಂತ ಸ್ಥಳದಲ್ಲಿಯೇ ಬ್ರದರ್ಸ್ ಕೆಫೆ ಆರಂಭಿಸಿದರು. ಯಾವುದೇ ಶಬ್ದ ಮಾಲಿನ್ಯವಿಲ್ಲದ ಮತ್ತು ಏಕಾಂತ ಬಯಸುವವರಿಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದೆ.

ನಗರದ ಸುತ್ತಮುತ್ತಲಿನ ವಾರ್ಡ್ ಜನರು ಮತ್ತು ಬೇರೆ ಬೇರೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ಜನರ ಆಕರ್ಷಣೆ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.