ಗೌರಿಬಿದನೂರು: ನಗರದ ನೇತಾಜಿ ಕ್ರೀಡಾಂಗಣದಲ್ಲಿ ಫೆ.25ರಂದು ಕಾಂಗ್ರೆಸ್, ಎನ್.ಎಸ್.ಯು.ಐ, ಯುವ ಘಟಕ ಹಾಗೂ ಅಕ್ಷರ ಫೌಂಡೇಷನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಕಾರದೊಂದಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿನ ನಿರುದ್ಯೋಗ ಯುವ ಜನರಿಗೆ ಉದ್ಯೋಗದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಕ್ಷದ ಯುವ ಘಟಕದ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈಗಾಗಲೇ ಕುಡುಮಲಕುಂಟೆಯಲ್ಲಿ 3 ಹಂತದ ಕೈಗಾರಿಕೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆ ಯುವಕರಿಗೆ ಪ್ರೇರಣೆ ನೀಡಿ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ತಿಳಿಸಬೇಕಾಗಿದೆ. 10ಸಾವಿರ ಮಂದಿ ಯುವಕರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು
ಹೇಳಿದರು.

ಅಕ್ಷರ ಫೌಂಡೇಷನ್ ಗ್ರಾಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕುಮಾರ್ ಉಪ್ಪಾರ್ ಮಾತನಾಡಿ, 8ನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸುಮಾರು 15 ಸಾವಿರ ಉದ್ಯೋಗದ ಅವಕಾಶವಿದೆ. ಮೇಳದಲ್ಲಿ 90ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದರು.

ಮಾಹಿತಿಗಾಗಿ ದೀಪು - 9901237134, ಮಂಜುನಾಥ್ - 9742211655, ಅಸ್ಲಾಂ ಉಲ್ಲಾ ಶರೀಪ್ - 7829508397, ದಾವುದ್ - 9482668119, ವಿಶ್ವನಾಥ್ - 9980378216, ಹರ್ಷವರ್ಧನ್ ರೆಡ್ಡಿ - 8722480111 ಸಂಪರ್ಕಿಸಬೇಕಾಗಿದೆ. ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಅಭ್ಯರ್ಥಿಗಳು https://www.Gowribidanurjobfair.com/ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ ಎನ್.ವೇಣು, ಯುವ ಮುಖಂಡರಾದ ಅಸ್ಲಾಂ ಉಲ್ಲಾ, ಶರೀಪ್, ದಾವೂದ್, ದೀಪಂಶು, ವಿಶ್ವನಾಥ್, ವೆಂಕಟರವಣ, ವಿ.ಎಲ್.ಶ್ರೀನಿವಾಸ್, ಶ್ಯಾಂ, ಅರುಣ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.