ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯ ಸಿವಿಲ್ ನ್ಯಾಯಾಲಯದ ಮುಂದೆ ಇರುವ ಬಿರಿಯಾನಿ ಮನೆಯ ನೇತಾಜಿ ವೃತ್ತದ ಯುವಕ ವಿ.ಮಂಜುನಾಥ್ ಅವರ ರುಚಿಕರ ಹಾಗೂ ಗುಣಮಟ್ಟದ ಧಮ್ ಬಿರಿಯಾನಿ ಜನರ ಬಾಯಲ್ಲಿ ನೀರೂರಿಸುತ್ತದೆ.

ಪಟ್ಟಣದ ಈ ಬಿರಿಯಾನಿ ಮನೆಯಲ್ಲಿನ ಧಮ್ ಬಿರಿಯಾನಿ, ಚಿಕನ್ ಕಬಾಬ್, ಎಗ್ ಪ್ರೈಡ್ ರೈಸ್, ತಿಂಡಿ ತಿನಿಸುಗಳು ಸುತ್ತಮುತ್ತಲಿನ ಜನರ ಮೆಚ್ಚುಗೆ ಪಡೆದಿದೆ. ಶನಿವಾರ, ಸೋಮವಾರ ಹೊರತುಪಡಿಸಿ ಉಳಿದ ಪ್ರತಿದಿನವು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಬಿರಿಯಾನಿ ಸಿಗುತ್ತದೆ. ವಿವಿಧ ಕಡೆಗಳಿಂದ ಪಟ್ಟಣಕ್ಕೆ ಬರುವ ಜನರು, ಕುಟುಂಬ ಸದಸ್ಯರು ಆಗಮಿಸಿ ಧಮ್ ಬಿರಿಯಾನಿ ಸೇವಿಸುತ್ತಾರೆ.

ಕೊರೊನಾ ಮುಂಚೆ ತಳ್ಳುವ ಗಾಡಿಯಲ್ಲಿ ಮಂಜುನಾಥ್ ಹಲವು ಬಗೆಯ ಮಾಂಸದ ಖಾದ್ಯಗಳನ್ನು ತಯಾರು ಮಾಡಿದ್ದರು. ಇದೀಗ ನ್ಯಾಯಾಲಯದ ಮುಂದೆ ಸಣ್ಣ ಕೊಠಡಿಯಲ್ಲಿ ‘ಬಿರಿಯಾನಿ ಮನೆ’ ಆರಂಭಿಸಿದ್ದಾರೆ. ದಿನಸಿ ವ್ಯಾಪಾರಕ್ಕಿಂತ ಬಿರಿಯಾನಿ ಮನೆ ಆರಂಭಿಸಬೇಕು ಎಂದು ಉತ್ಸುಕರಾಗಿದ್ದರು. ಪ್ರತಿದಿನ 15 ಕೆ.ಜಿಯಷ್ಟು ಗುಣಮಟ್ಟದ ಅಕ್ಕಿಯಿಂದ ಬಿರಿಯಾನಿ ತಯಾರಿಸುತ್ತಿದ್ದಾರೆ.

ವಾರಕ್ಕೆ ಒಂದರೆಡು ಬಾರಿ ವಿಶೇಷ ಎಂಬಂತೆ ಧಮ್ ಬಿರಿಯಾನಿ ಸೇವಿಸುತ್ತೇನೆ. ಬಿರಿಯಾನಿ ಮನೆಯ ಧಮ್ ಬಿರಿಯಾನಿ ಗುಣಮಟ್ಟ ಹಾಗೂ ರುಚಿಕರವಾಗಿದೆ. ಬೆಳಗ್ಗೆ ಸರ್ಕಾರಿ ಕೆಲಸಕ್ಕೆ ಹೋಗುವ ಮುನ್ನಾ ಬಿರಿಯಾನಿ ಸೇವಿಸುತ್ತೇನೆ. ಧಮ್ ಬಿರಿಯಾನಿ ಅಚ್ಚುಮೆಚ್ಚು ಎನ್ನುತ್ತಾರೆ ಸರ್ಕಾರಿ ಉದ್ಯೋಗಿ ಗಣೇಶ್.

ಕುಟುಂಬ ಮನೆ ಮಂದಿಯೆಲ್ಲಾ, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಆಗಮಿಸಿ ಧಮ್ ಬಿರಿಯಾನಿ ಸೇವಿಸುತ್ತಾರೆ. ಒಂದು ಪ್ಲೇಟಿನ ಧಮ್ ಬಿರಿಯಾನಿ ₹120. ಅರ್ಧ ಚಿಕನ್ ಕಬಾನ್ ₹50, ಒಂದು ಪ್ಲೇಟು ಕಬಾಬ್ ₹100ಕ್ಕೆ ಮಾರಾಟ ಮಾಡುತ್ತೇನೆ. ಪ್ರತಿದಿನ ₹12 ಸಾವಿರ ವ್ಯಾಪಾರದಲ್ಲಿ ಖರ್ಚು ಆಗಿ, ₹3 ರಿಂದ ₹4 ಸಾವಿರ ಆದಾಯ ಬರುತ್ತದೆ ಎಂದು ವಿ.ಮಂಜುನಾಥ್ ತಿಳಿಸಿದರು.

‘ಜನರಿಗೆ ಗುಣಮಟ್ಟ ಹಾಗೂ ರುಚಿಕರವಾದ ಖಾದ್ಯ ನೀಡುವುದು ನನ್ನ ಆದ್ಯತೆ. ಗ್ರಾಹಕರಿಗೆ ಮೋಸ ಮಾಡುವುದಿಲ್ಲ. ಶುದ್ಧ ಕುಡಿಯುವ ನೀರು, ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ’ ಎಂದು ಮಂಜುನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.