ಚಿಕ್ಕಬಳ್ಳಾಪುರ: ’ವೈಜ್ಞಾನಿಕ ಬೆಳವಣಿಗೆಯಿಂದ ದೇಶ ಪ್ರಗತಿಯತ್ತ ಸಾಗುತ್ತದೆ. ವೈಜ್ಞಾನಿಕ ವಿಚಾರಗಳಲ್ಲಿ ಯಾವುದೇ ಒಂದು ದೇಶ ಮುನ್ನಡೆ ಸಾಧಿಸಿದರೆ ಅದು ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ ಎನ್ನುವುದರ ಪ್ರತೀಕ‘ ಎಂದು ಇಸ್ರೊ ವಿಜ್ಞಾನಿ ಡಾ.ಬಿ.ಆರ್.ಗುರುಪ್ರಸಾದ್ ತಿಳಿಸಿದರು.

ನಗರದ ಎಸ್‌ಜೆಸಿ ತಾಂತ್ರಿಕ ವಿದ್ಯಾಲಯದಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನರ ಚಿಂತನೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ. ದೇಶದಕ್ಕೆ ಅನೇಕ ವಿಜ್ಞಾನಿಗಳು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು. ಸಿ.ವಿ.ರಾಮನ್ ಅವರ ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಎಸ್‌ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು ಮಾತನಾಡಿ, ’ವಿಜ್ಞಾನಿಗಳು ದೇಶದ ಬೆನ್ನೆಲುಬು. ದೇಶದ ಆರ್ಥಿಕ ಪ್ರಗತಿ ವೈಜ್ಞಾನಿಕ ಬೆಳವಣಿಗೆಯಿಂದ ಮಾತ್ರ ಸಾಧ್ಯ. ತಂತ್ರಜ್ಞಾನದ ಸಹಾಯದಿಂದ ಮನುಷ್ಯನ ಬೆಳವಣಿಗೆ ಸಾಧ್ಯವಾಗುತ್ತದೆ‘ ಎಂದು ಹೇಳಿದರು.

ಡಿಆರ್‌ಡಿಒ ವಿಜ್ಞಾನಿ ಡಾ.ಪಿ.ರಘೋತ್ತಮರಾವ್, ನಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕಿ ವೈ.ಸಿ.ಕಮಲ, ಬಿಜಿಎಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಟಿ.ಮುನಿಕೆಂಚೇಗೌಡ, ಎಸ್‌ಜೆಸಿಐಟಿ ಕುಲಸಚಿವ ಜೆ.ಸುರೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.