ಚೇಳೂರು: ತಾಲ್ಲೂಕಿನ ಪುಲಗಲ್ ಗ್ರಾಮ ಪಂಚಾಯಿತಿಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ಟಿ.ವೆಂಕಟರಮಣ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕೆ.ಸುಧಾಕರರೆಡ್ಡಿ ಮತ್ತು ಎಂ.ಟಿ. ವೆಂಕಟರಮಣ ನಾಮಪತ್ರ ಸಲ್ಲಿಸಿದ್ದರು. ಪಂಚಾಯಿತಿಯಲ್ಲಿ 14 ಸದಸ್ಯರಿದ್ದು, ಕೆ.ಸುಧಾಕರರೆಡ್ಡಿ ಅವರಿಗೆ ಏಳು ಹಾಗೂ ಎಂ.ಟಿ.ವೆಂಕಟರಮಣ ಏಳು ಸದಸ್ಯರು ಮತ ಹಾಕಿದರು. ಮತ ಸಮಾನವಾದಾಗ ಎಲ್ಲರ ಒಪ್ಪಿಗೆಯಂತೆ ಚೀಟಿ ಮೂಲಕ ಅಧ್ಯಕ್ಷರ ಆಯ್ಕೆಗೆ ನಿರ್ಧರಿಸಲಾಯಿತು. ಲಾಟರಿ ಮೂಲಕ ಎಂ.ಟಿ.ವೆಂಕಟರಮಣಗೆ ಅಧ್ಯಕ್ಷ ಸ್ಥಾನ ಒಲಿಯಿತು.

ಚೇಳೂರು ತಹಶೀಲ್ದಾರ್ ಎ.ವಿ.ಶ್ರೀನಿವಾಸಲು ನಾಯುಡು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಗ್ರಾ.ಪಂ ಪಿಡಿಓ ಶ್ರೀನಿವಾಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.