ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಕಸಕಡ್ಡಿಗಳಿಂದ ತುಂಬಿರುವ ಚರಂಡಿ
ಚಿಂತಾಮಣಿಯ ಆಶ್ರಯ ಬಡಾವಣೆಯಲ್ಲಿ ಸ್ವಚ್ಚತೆ ಇಲ್ಲದೆ ಸೊಳ್ಳೆಗಳ ಆಶ್ರಯ ತಾಣವಾಗಿರುವ ಪ್ರದೇಶ
ಸಿಸ್ಟನ್ ಟ್ಯಾಂಕ್ ಸ್ವಚ್ಛತೆ
ಗ್ರಾಮಗಳಲ್ಲಿ ಕನಿಷ್ಠ 45 ದಿನಗಳಿಗೊಮ್ಮೆ ಚರಂಡಿ ಸ್ವಚ್ಛತೆಗೊಳಿಸಬೇಕು. 20-25 ದಿನಗಳಿಗೊಮ್ಮೆ ಸಾರ್ವಜನಿಕ ನೀರು ಸಂಗ್ರಹಣೆಯ ಸಿಸ್ಟನ್ ಟ್ಯಾಂಕ್ ಪೈಪ್‌ಗಳನ್ನು ಸ್ವಚ್ಛಗೊಳಿಸಿ ಫೋಟೊ ಸಮೇತ ವರದಿ ನೀಡಬೇಕು ಎಂದು ಪಿಡಿಒಗಳಿಗೆ ಸೂಚಿಸಲಾಗಿದೆ. ಎಸ್.ಆನಂದ್ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಚರಂಡಿ ಇಲ್ಲ ಕಂಬಾಲಹಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲ. ಇದ್ದ ಕಡೆ ನಿರ್ವಹಣೆ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುತ್ತದೆ. ನೀರು ಸಂಗ್ರಹಣೆಯ ತೊಟ್ಟಿಯ ಸುತ್ತಮುತ್ತಲು ಗಿಡಗಂಟೆಗಳು ಬೆಳೆದುಕೊಂಡಿವೆ. ಕೂಡಲೇ ಸ್ವಚ್ಛತೆಗೆ ಮುಂದಾಗಬೇಕು ರಾಮಪ್ಪ ಕಂಬಾಲಹಳ್ಳಿ ಸೊಳ್ಳೆಗಳ ಆವಾಸಸ್ಥಾನ ನಗರದ ವೆಂಕಟಗಿರಿ ಕೋಟೆಯ ಪಿಲ್ಟರ್ ಬೆಡ್ ಸುತ್ತಮುತ್ತಲು ಗಿಡಗಳು ಬೆಳೆದು ಚರಂಡಿ ಸೊಳ್ಳೆಗಳ ಆವಾಸಸ್ಥಾನಗಳಾಗಿವೆ. ನೀರು ಹರಿಯುವ ಕಾಲುವೆಗಳಿಗೆ ನಾಶಪಡಿಸಿದ ಹಳೆ ಮನೆಗಳ ಕಲ್ಲು ಮಣ್ಣು ಮತ್ತಿತರ ವ್ಯರ್ಥ ವಸ್ತುಗಳನ್ನು ಸುರಿಯುತ್ತಾರೆ. ನಗರಸಭೆಯವರು ಕೂಡಲೇ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು. ಸುನಿಲ್ ಸ್ಥಳೀಯ ನಿವಾಸಿ