ಆಲ್ದೂರು: ಮಲ್ಲಂದೂರು ಠಾಣಾ ವ್ಯಾಪ್ತಿಯ ಮಸಗಲಿ ಗ್ರಾಮದ ದೇವರಾಜ್ ಗೌಡ ಅವರ ಕಾಫಿ ಗೋಡೌನ್ನಿಂದ 720 ಕೆ.ಜಿ ಕಾಳುಮೆಣಸು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಗೋಡೌನ್ನಲ್ಲಿ ದಾಸ್ತಾನು ಮಾಡಿದ್ದ ಕಾಳುಮೆಣಸು ಕಳವಾಗಿರುವ ಬಗ್ಗೆ ದೇವರಾಜ್ ಅವರು ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಚಿಕ್ಕಮಗಳೂರು ಇಂದಿರಾಗಾಂಧಿ ಬಡಾವಣೆ ನಿವಾಸಿ ಲೋಹಿತ್ ಎಂಬಾತನನ್ನು ಬಂಧಿಸಿ ಒಟ್ಟು ₹4,26,820 ಮೌಲ್ಯದ 646 ಕೆಜಿ ಕಾಳುಮೆಣಸು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಳಿ ಇದ್ದ ಕಾರು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ವೃತ್ತ ನಿರೀಕ್ಷಕ ಸತ್ಯನಾರಾಯಣ, ಪಿಎಸ್ಐ ಗುರು ಎ.ಸಜ್ಜನ್, ಸಿಬ್ಬಂದಿ ಭರತ್ ಭೂಷಣ್, ಕುದರಾಳ್ ಕರಿಯಪ್ಪ, ಚಿದಾನಂದ, ನವೀನ್ ಮಂಡೆಗಾರ್, ನಿಂಗರಾಜ್, ದರ್ಶನ್, ಸಾಗರ್, ನವೀನ್, ತೀರ್ಥೇಶ್, ಅಶೋಕ್ ಮತ್ತು ನಟರಾಜ್ ಭಾಗವಹಿಸಿದ್ದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.